ಎಲ್ಲಾ ಜಿಲ್ಲೆಗಳಲ್ಲೂ ಉಚಿತ ಔಷಧ ವಿತರಣೆ; ಜನರ ಸಹಾಯಕ್ಕೆ ಮುಂದಾದ ಸಿಎಂ ಪುತ್ರ ವಿಜಯೇಂದ್ರ

ಶುಕ್ರವಾರ, 3 ಏಪ್ರಿಲ್ 2020 (10:46 IST)
ಬೆಂಗಳೂರು : ಕೊರೊನಾ ಭೀತಿ ಹಿನ್ನಲೆ ಲಾಕ್ ಡೌನ್ ಮಾಡಿದ ಕಾರಣ ಔಷಧಗಳನ್ನು ಖರೀದಿಸಲು ಪರದಾಡುತ್ತಿರುವ ಜನರ ಸಹಾಯಕ್ಕೆ ಇದೀಗ ಸಿಎಂ ಪುತ್ರ ವಿಜಯೇಂದ್ರ ನಿಂತಿದ್ದಾರೆ.

ಕೊರೊನಾ ವೈರಸ್ ತಡೆಯಲು ಇಡೀ ದೇಶವನ್ನೇ ಲಾಕ್ ಔಟ್ ಮಾಡಲಾಗಿದೆ. ಇದರಿಂದ ಕೆಲವರಿಗೆ ಅಗತ್ಯವಾದ ಮೆಡಿಸಿನ್ ಗಳನ್ನು ಖರೀದಿಸಲು ಕಷ್ಟಕರವಾಗಿದೆ. ಇದನ್ನು ಮನಗೊಂಡ ಸಿಎಂ ಪುತ್ರ ವಿಜಯೇಂದ್ರ ಅಂತವರ ಸಹಾಯಕ್ಕೆ ಮುಂದಾಗಿದ್ದಾರೆ.

ವಿಜಯೇಂದ್ರ ನೇತೃತ್ವದಲ್ಲಿ ಕ್ಯಾಂಪೇನ್ ಮಾಡಿ ಎಲ್ಲಾ ಜಿಲ್ಲೆಗಳಲ್ಲೂ ಉಚಿತ ಔಷಧ ವಿತರಣೆ ಮಾಡುತ್ತಿದ್ದಾರೆ. ಆ ಮೂಲಕ ಕೊರೊನಾ ಮುಕ್ತಿಗೆ ವಿಜಯೇಂದ್ರ ಕೈಜೋಡಿಸಿದ್ದಾರೆ.

 

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಪ್ರಧಾನಿ ಮೋದಿಯನ್ನು ಬಿಗ್ ಬಾಸ್ ಗೆ ಹೋಲಿಕೆ ಮಾಡಿದ ಟ್ವಿಟರಿಗರು