ಕೊರೊನಾ ಸೋಂಕಿತರ ಸಂಖ್ಯೆ 2 ಸಾವಿರ ಗಡಿದಾಟಿದೆ- ಆರೋಗ್ಯ ಸಚಿವ ಹರ್ಷವರ್ಧನರಿಂದ ಶಾಕಿಂಗ್ ಸುದ್ದಿ

ಶುಕ್ರವಾರ, 3 ಏಪ್ರಿಲ್ 2020 (11:29 IST)
ನವದೆಹಲಿ : ಕೊರೊನಾ ಸೋಂಕಿತರ ಸಂಖ್ಯೆ 2 ಸಾವಿರ ಗಡಿದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ ಶಾಕಿಂಗ್ ಸುದ್ದಿ ನೀಡಿದ್ದಾರೆ.


ಈ ಬಗ್ಗೆ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕೊರೊನಾ ತಡೆಗೆ ನಿರಂತರ ಶ್ರಮಿಸುತ್ತಿದ್ದೇವೆ . ವೈದ್ಯರು ಸಿಬ್ಬಂದಿಗಳು ನಿರಂತರ ಶ್ರಮಪಡುತ್ತಿದ್ದಾರೆ. ಆದರೂ ಸೋಂಕಿತರ ಸಂಖ್ಯೆ 2 ಸಾವಿರ ಗಡಿದಾಟಿದೆ. 24 ಗಂಟೆಯಲ್ಲಿ 328 ಮಂದಿಗೆ ಕೊರೊನಾ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೂ ಕೊರೊನಾಗೆ 50 ಮಂದಿ ಬಲಿಯಾಗಿದ್ದಾರೆ . 20 ಹಾಟ್ ಸ್ಪಾಟ್ ಗಳನ್ನು ಗುರುತಿಸಿದ್ದೇವೆ ಎಂದು ಆತಂಕಕಾರಿ ಹೇಳಿಕೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಆಹಾರವಿಲ್ಲದೇ ಪರದಾಡುತ್ತಿದ್ದ ಕಾರ್ಮಿಕರಿಗೆ ಆಹಾರ ವಿತರಿಸಿದ ಬಿಜೆಪಿ ಶಾಸಕ