Select Your Language

Notifications

webdunia
webdunia
webdunia
webdunia

ಲಾಕ್ ಡೌನ್ ಎಫೆಕ್ಟ್ : ಕಳ್ಳಭಟ್ಟಿಗೆ ಭಾರೀ ಬೇಡಿಕೆ

ಲಾಕ್ ಡೌನ್ ಎಫೆಕ್ಟ್ : ಕಳ್ಳಭಟ್ಟಿಗೆ ಭಾರೀ ಬೇಡಿಕೆ
ರಾಯಚೂರು , ಬುಧವಾರ, 22 ಏಪ್ರಿಲ್ 2020 (14:04 IST)
ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದರೂ ಕೆಲವೆಡೆ ಕಳ್ಳಭಟ್ಟಿ ಸರಾಯಿ ಭಾರೀ ಬೇಡಿಕೆ ಕಂಡುಬರುತ್ತಿದೆ.

ಕರೊನಾ ವೈರಸ್ ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ದೇಶದಾದ್ಯಂತ ಲಾಕ್ ಡೌನ್ ಇರುವ ನಿಮಿತ್ತ ಮದ್ಯ ಮಾರಾಟ ಬಂದ್ ಮಾಡಲಾಗಿದೆ. ಆದರೂ ರಾಯಚೂರು ಜಿಲ್ಲೆಯ 50 ಕ್ಕೂ ಹೆಚ್ಚು ತಾಂಡಾಗಳಲ್ಲಿ ಕಳ್ಳ ಭಟ್ಟಿ ಸರಾಯಿಯನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ.

ಇದನ್ನು ನಿಯಂತ್ರಿಸುವ ಸಲುವಾಗಿ ಜಿಲ್ಲಾದ್ಯಾಂತ ವಿಶೇಷ ಕಾರ್ಯಾಚರಣೆ ನಡೆಸುವ ಮೂಲಕ 8 ಪ್ರಕರಣಗಳು ದಾಖಲಾಗಿವೆ. ಇಲ್ಲಿಯವರೆಗೆ ಒಟ್ಟು 111 ಪ್ರಕರಣಗಳು ದಾಖಲಾಗಿವೆ. 67 ಜನರ ಮೇಲೆ ಕಾನೂನು ರೀತ್ಯ ಕ್ರಮವನ್ನು ಜರುಗಿಸಲಾಗಿದೆ.  ಒಟ್ಟು 90,895 ರೂಪಾಯಿ ಮೌಲ್ಯದ ಕೈ ಹೆಂಡವನ್ನು ಜಪ್ತಿ ಮಾಡಲಾಗಿದೆ.  



Share this Story:

Follow Webdunia kannada

ಮುಂದಿನ ಸುದ್ದಿ

ಪಾದರಾಯನಪುರ ಪ್ರಕರಣದ ನಂತರ ಬುದ್ದಿ ಕಲಿತ ಶಾಸಕ ಜಮೀರ್ ಅಹಮ್ಮದ್