Publish Date: Wed, 22 Apr 2020 (09:14 IST)
Updated Date: Wed, 22 Apr 2020 (09:17 IST)
ಬೆಂಗಳೂರು: ಕೊರೋನಾದಿಂದ ಸಂಕಷ್ಟಕ್ಕೀಡಾದ ಬಡವರಿಗೆ ನಟ ಶಿವರಾಜ್ ಕುಮಾರ್ ತಮ್ಮ ಅಭಿಮಾನಿ ಬಳಗದವರ ಮೂಲಕ ಪ್ರತಿನಿತ್ಯ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ. ಇದಕ್ಕಾಗಿ ಅವರು ಮಾಡುತ್ತಿರುವ ವೆಚ್ಚವೆಷ್ಟು ಗೊತ್ತೇ?
ಶಿವರಾಜ್ ಕುಮಾರ್ ಪ್ರತಿದಿನ ಬಡವರು, ಸಿನಿ ಕಾರ್ಮಿಕರು ಸೇರಿದಂತೆ 500 ಜನರಿಗೆ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ. ಇದಕ್ಕಾಗಿ ಅವರು ದಿನವೊಂದಕ್ಕೆ 1.5 ಲಕ್ಷ ರೂ. ಖರ್ಚು ಮಾಡುತ್ತಿದ್ದಾರೆ ಎಂದು ಅವರ ಅಭಿಮಾನಿ ಬಳಗ ಹೇಳಿಕೊಂಡಿದೆ.
ಸ್ಯಾಂಡಲ್ ವುಡ್ ನ ಎಲ್ಲಾ ಸೆಲೆಬ್ರಿಟಿಗಳೂ ಈಗ ತಮ್ಮ ಅಭಿಮಾನಿ ಬಳಗದ ಮೂಲಕ ಬಡವರ ಹೊಟ್ಟೆ ತುಂಬಿಸುವ ಕೆಲಸ ಮಾಡುತ್ತಿದ್ದಾರೆ. ಅದರಲ್ಲೂ ಶಿವಣ್ಣ ಇಷ್ಟೊಂದು ಕಾಳಜಿ ತೆಗೆದುಕೊಳ್ಳುತ್ತಿರುವುದಕ್ಕೆ ಅವರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.