Select Your Language

Notifications

webdunia
webdunia
webdunia
webdunia

ಕೊರೊನಾ ಹೆಚ್ಚಾದಂತೆ ಕಳ್ಳಭಟ್ಟಿ ಸಾರಾಯಿ ತಯಾರಿ ಜೋರು

ಕೊರೊನಾ ಹೆಚ್ಚಾದಂತೆ ಕಳ್ಳಭಟ್ಟಿ ಸಾರಾಯಿ ತಯಾರಿ ಜೋರು
ಕಲಬುರಗಿ , ಗುರುವಾರ, 23 ಏಪ್ರಿಲ್ 2020 (22:09 IST)
ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮಗಾಗಿ ಮದ್ಯ ಮಾರಾಟ ನಿಷೇಧಿಸಲಾಗಿದೆ. ಆದರೂ ಕಳ್ಳಭಟ್ಟಿ ದಂಧೆ ಅಲ್ಲಲ್ಲಿ ಮುಂದುವರಿದೇ ಇದೆ.

ಕಲಬುರಗಿ ಜಿಲ್ಲೆಯಾದ್ಯಂತ ಮದ್ಯ ಉತ್ಪಾದನೆ, ಸಾಗಾಣಿಕೆ ಹಾಗೂ ಮದ್ಯ ಮಾರಾಟ ನಿಷೇಧಿಸಲಾಗಿದೆ. ಕಲಬುರಗಿ ವಿಭಾಗದ ಅಬಕಾರಿ ಅಧಿಕಾರಿ ಹಾಗೂ ಸಿಬ್ಬಂದಿಗಳ ನೇತೃತ್ವದಲ್ಲಿ ಸಣ್ಣೂರ ತಾಂಡಾದ ಹೊರಗಡೆ ವಿವಿಧ ಹೊಲಗಳಲ್ಲಿ ದಾಳಿ ನಡೆಸಿ ಒಟ್ಟು 350 ಲೀ. ಬೆಲ್ಲದ ಕೊಳೆ ಹಾಗೂ 15 ಲೀ. ಕಳ್ಳಭಟ್ಟಿ ಸಾರಾಯಿ ಜಪ್ತಿಪಡಿಸಿಕೊಂಡು 3 ಪ್ರಕರಣಗಳನ್ನು ದಾಖಲಿಸಲಾಗಿದೆ.

ಕಲಬುರಗಿ ಉಪವಿಭಾಗದ ಅಬಕಾರಿ ಉಪ ನಿರೀಕ್ಷಕ ಸಂತೋಷ ಕುಮಾರ ಹಾಗೂ ಕಲಬುರಗಿ ವಲಯ ನಂ. 1ರ ಅಬಕಾರಿ ಉಪ ನಿರೀಕ್ಷಕ ದಾವಲಸಾಬ ಹಾಗೂ ಕಲಬುರಗಿ ಡಿಸಿಇಐಬಿ ಅಬಕಾರಿ ನಿರೀಕ್ಷಕ ಪಂಡಿತ ಅವರು ತಲಾ ಒಂದು ಸೇರಿದಂತೆ ಒಟ್ಟು ಮೂರು ಪ್ರಕರಣಗಳನ್ನು ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ. ಜಪ್ತಿ ಮಾಡಲಾದ ಒಟ್ಟು ಮದ್ಯದ ಅಂದಾಜು ಮೌಲ್ಯ  8000 ರೂ. ಇರುತ್ತದೆ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಪಾದರಾಯನಪುರದಿಂದ ಎಸ್ಕೇಪ್ : 5 ಮಂದಿ ಸಿಕ್ಕಿದ್ದೆಲ್ಲಿ ಗೊತ್ತಾ?