Publish Date: Thu, 23 Apr 2020 (10:01 IST)
Updated Date: Thu, 23 Apr 2020 (10:04 IST)
ಬೆಂಗಳೂರು : ಲಾಕ್ ಡೌನ್ ಹಿನ್ನಲೆಯಲ್ಲಿ ತವರೂರಿಗೆ ತೆರಳಲು ಆಗದ ಉತ್ತರ ಪ್ರದೇಶದ ಮೂಲದ ಕಾರ್ಮಿಕರು ಇದೀಗ ಸೈಕಲ್ ಮೇಲೆ ತಮ್ಮೂರಿಗೆ ಪ್ರಯಾಣ ಬೆಳೆಸಿದ್ದಾರೆ.
ಉತ್ತರ ಪ್ರದೇಶದ ಹರಿದೋಹಿ ಜಿಲ್ಲೆಯ 41 ಕಾರ್ಮಿಕರು ಬೆಂಗಳೂರಿನಲ್ಲಿ ಕೆಲಸಮಾಡಿಕೊಂಡಿದ್ದರು. ಆದರೆ ಕೊರೊನಾ ಹಿನ್ನಲೆಯಲ್ಲಿ ಇಡೀ ದೇಶವೇ ಲಾಕ್ ಡೌನ್ ಆದ ಕಾರಣ ಸಾರಿಗೆ ಇಲ್ಲದೆ ತಮ್ಮೂರಿಗೆ ತೆರಳು ಆಗದೆ, ವಸತಿ, ಆಹಾರವಿಲ್ಲದೇ ಪರದಾಡುತ್ತಿದ್ದರು.
ಆದರೆ ಇದೀಗ ತಮ್ಮೂರಿಗೆ ಪ್ರಯಾಣ ಬೆಳೆಸಲು ಸಿದ್ಧರಾದ ಕಾರ್ಮಿಕರು ಸೈಕಲ್ ಮೂಲಕ ಊರು ಸೇರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.