Publish Date: Sun, 26 Apr 2020 (22:23 IST)
Updated Date: Sun, 26 Apr 2020 (22:26 IST)
ಲಾಕ್ ಡೌನ್ ಹಿನ್ನೆಲೆಯಲ್ಲಿ ಕೆಲವು ತಾಂಡಾಗಳಲ್ಲಿ ಕಳ್ಳಭಟ್ಟಿ ತಯಾರಿಕೆ ಮುಂದುವರಿದಿದ್ದು, ಅಧಿಕಾರಿಗಳು ದಾಳಿ ನಡೆಸುತ್ತಿದ್ದಾರೆ.
ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಬಳಿಯಿರುವ ಗುಡ್ಡದ ಭೈರಾಪೂರ ತಾ೦ಡಾದಲ್ಲಿ ನಡೆಯುತ್ತಿದ್ದ ಕಳ್ಳ ಭಟ್ಟಿ ಸರಾಯಿ ಘಟಕದ ಮೇಲೆ ಪೋಸರು ದಾಳಿ ನಡೆಸಿ ಒಬ್ಬ ಆರೋಪಿಯನ್ನು ಬ೦ಧಿಸಿದ್ದಾರೆ.
ಕಳ್ಳ ಭಟ್ಟಿ ಸರಾಯಿ ಮತ್ತು ಕಳ್ಳ ಭಟ್ಟಿ ಸರಾಯಿ ತಯಾರಿಕಾ ಪರಿಕರಗಳನ್ನು ಪೊಲೀಸರು ನಾಶಪಡಿಸಿದ್ದಾರೆ.
ಈ ಕುರಿತು ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.