Publish Date: Sun, 26 Apr 2020 (20:57 IST)
Updated Date: Sun, 26 Apr 2020 (21:00 IST)
ಜೆಡಿಎಸ್ ನ ವಿಧಾನ ಪರಿಷತ್ ಸದಸ್ಯ ಹಾಗೂ ಆತನ ಮಗನ ದುಂಡಾವರ್ತನೆಗೆ ಸಚಿವರೊಬ್ಬರು ಕಿಡಿಕಾರಿದ್ದಾರೆ.
ಪರ್ತಕರ್ತರು ಹಾಗೂ ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ನಡೆಸಿರೋ ಕೆ.ಟಿ.ಶ್ರೀಕಂಠೇಗೌಡನ ಪುತ್ರನ ವಿರುದ್ಧ ಕಾನೂನು ಕ್ರಮ ಆಗುತ್ತದೆ. ಶ್ರೀಕಂಠೇಗೌಡರನ್ನೂ ಕಾನೂನು ಸುಮ್ಮನೆ ಬಿಡೋದಿಲ್ಲ ಅಂತ ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.
ಮಗನನ್ನು ಎತ್ತಿಕಟ್ಟಿ ಕೊರೊನಾ ವೈರಸ್ ತಡೆಗಾಗಿ ನಡೆಯುತ್ತಿರುವ ಲಾಕ್ ಡೌನ್ ಸಮಯದಲ್ಲಿ ದುಂಡಾವರ್ತನೆ ತೋರಿರೋದು ಸರಿಯಲ್ಲ.
ಲಾಕ್ ಡೌನ್ ಸಮಯದಲ್ಲಿ ಪದೇ ಪದೇ ಈ ಥರದ ಘಟನೆಗಳು ಮರುಕಳಿಸಬಾರದು ಅಂತ ರಾಮುಲು ಹೇಳಿದ್ದಾರೆ.