Publish Date: Mon, 27 Jan 2020 (15:00 IST)
Updated Date: Mon, 27 Jan 2020 (15:02 IST)
ಸುಂದರವಾದ ಯುವತಿಯರನ್ನು ಕರೆತಂದು ಕೆಲಸದ ಆಫರ್ ನೀಡೋದಾಗಿ ಹೇಳಿ ವೇಶ್ಯಾವಾಟಿಕೆಗೆ ತಳ್ಳುತ್ತಿದ್ದ ಜಾಲ ಪತ್ತೆಯಾಗಿದೆ.
ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಿದ ಪೊಲೀಸರು ಆರು ಯುವತಿಯರನ್ನು ರಕ್ಷಣೆ ಮಾಡಿದ್ದಾರೆ. ಇದರ ಕಿಂಗ್ ಪಿನ್ ನನ್ನು ಬಂಧನ ಮಾಡಲಾಗಿದೆ.
ಬೆಂಗಳೂರಿನಲ್ಲಿ ಘಟನೆ ನಡೆದಿದ್ದು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಗುರುರಾಜ್, ಪ್ರಜ್ವಲ್, ಮುಖೀದ್ ಪರಾರಿಯಾಗಿದ್ದಾರೆ. ಈಜಿಪುರದ ನಿವಾಸಿ ಸೂರ್ಯನನ್ನು ಪೊಲೀಸರು ಬಂಧನ ಮಾಡಿದ್ದಾರೆ.
ಹೂವಾನ್ ತೈ ಸ್ಪಾ ನಡೆಸುತ್ತಾ ಅದರಲ್ಲಿ ಹುಡುಗಿಯರೊಂದಿಗೆ ಗಿರಾಕಿಗಳನ್ನು ಕರೆತರುತ್ತಿದ್ದರು. ವಿವಿಧ ಬಾಡಿ ಮಸಾಜ್ ಹೆಸರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದರು. ಬಹುತೇಕ ಯುವತಿಯರು ಹೊರರಾಜ್ಯದವರೇ ಆಗಿದ್ದಾರೆ.