ಗದಗ: ರೈತರಿಗಾಗಿ ಬೆಂಬಲ ಬೆಲೆ ಘೋಷಿಸಿ ಖರೀದಿ ಕೇಂದ್ರ ಆರಂಭ ಮಾಡಿ ಎಂದರೆ ರಾಜ್ಯದ ಕಾಂಗ್ರೆಸ್ ಸರ್ಕಾರ ಈಗ ಶಾಸಕರ ಖರೀದಿಗಾಗಿ ಕೇಂದ್ರ ತೆರೆದಿದೆ ಎಂದು ಸಂಸದ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ವ್ಯಂಗ್ಯ ಮಾಡಿದ್ದಾರೆ.
ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಖರೀದಿಗಾಗಿ ಒಬ್ಬೊಬ್ಬ ಶಾಸಕರಿಗೆ 50 ರಿಂದ 60 ಕೋಟಿ ಹಣ ಕೊಟ್ಟಿದ್ದಾರಂತೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕೊಡುವ ಬಗ್ಗೆ ಹೇಳಿದ್ದಾರೆ. ಶಾಸಕರ ಖರೀದಿ ಮಾಡಲು ಖರೀದಿ ಕೇಂದ್ರ ಆರಂಭ ಮಾಡಿದ್ದಾರೆ ವಿನಾ: ರೈತರು ಬೆಳೆದ ಬೆಳೆಗೆ ಖರೀದಿ ಕೇಂದ್ರ ಆರಂಭಿಸಿಲ್ಲ ಎಂದು ಆಕ್ರೋಶ ಹೊರಹಾಕಿದರು.
ನಿಮ್ಮ ಬಳಿ ರೈತರ ಬೆಳೆ ಖರೀದಿಗಾಗು ಹಣವಿಲ್ಲ, ಆದರೆ ಶಾಸಕರನ್ನು ಖರೀದಿ ಮಾಡಲು ನಿಮ್ಮಲ್ಲಿ ಹಣವಿದೆ. ಯಾವ ಪುರುಷಾರ್ಥಕ್ಕಾಗಿ ಸರ್ಕಾರ ನಡೆಸುತ್ತಿದ್ದೀರಿ. ಒಬ್ಬರ ಕುರ್ಚಿ ಉಳಿಸಿಕೊಳ್ಳಲು ಹಾಗೂ ಮತ್ತೊಬ್ಬರ ಕುರ್ಚಿ ಪಡೆಯಲು ಶಾಸಕರ ಖರೀದಿ ನಡೆಸುತ್ತಿದ್ದಾರೆ ಎಂದರು.
ಕೈ ಶಾಸಕರು ತುಂಬಾನೇ ಲಕ್ಕಿ, ಆದರೆ ರಾಜ್ಯದ ಜನತೆಯ ಸಮಸ್ಯೆ ಮಾತ್ರ ಕೇಳುವವರಿಲ್ಲ.