ಚಳಿಗಾಲ ಆರಂಭವಾಗಿರುವುದರಿಂದ ಹಿಮಮಳೆ, ಹಿಮಗಾಳಿ ಸಾಮಾನ್ಯ. ಉತ್ತರ ಭಾರತದಲ್ಲಿ ಹಿಮಗಾಳಿಯಿಂದ ಜನ ನಲುಗಿಹೋಗುತ್ತಿದ್ದಾರೆ. ಉಷ್ಣಾಂಶ 0 ಡಿಗ್ರಿಗಿಂತಲೂ ಕಡಿಮೆ ಇರುವುದರಿಂದ ನದಿಯೆಲ್ಲಾ ಹಿಮವಾಗಿ ಮಾರ್ಪಾಡಾಗುತ್ತಿದೆ. ಇದರಿಂದ ಕೆಲ ಪ್ರಾಣಿಗಳು ಸಂಕಷ್ಟಕ್ಕೆ ಸಿಲುಕುತ್ತವೆ. ಶ್ವಾನವೊಂದು ಹೀಗೆ ತೊಂದರೆಗೆ ಸಿಲುಕಿತ್ತು. ಹಿಮದಿಂದ ಶ್ವಾನ ಆವೃತವಾಗಿದ್ದು, ಅಲ್ಲಿಂದ ಪಾರಾಗಲು ಅದಕ್ಕೆ ಸಾಧ್ಯವಾಗುವುದಿಲ್ಲ. ಆಗ ಓರ್ವ ವ್ಯಕ್ತಿ ಅದರ ಸಹಾಯಕ್ಕೆ ಬಂದಿದ್ದು, ನಾಯಿಯನ್ನು ರಕ್ಷಣೆ ಮಾಡಿದ್ದಾನೆ. ಜೀವದ ಹಂಗು ತೊರೆದು ಹಿಮ ನೀರಿನಲ್ಲಿ ತೆರಳಿ, ಸಿಲುಕಿದ್ದ ಶ್ವಾನವನ್ನು ರಕ್ಷಿಸಿದ್ದಾನೆ. ಸೋಶಿಯಲ್ ಮಿಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ವ್ಯಕ್ತಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.