ಪೋಷಕರು ಮಕ್ಕಳನ್ನು ತುಂಬಾ ಪ್ರಿತಿಯಿಂದ ನೋಡಿಕೊಳ್ತಾರೆ. ಮಕ್ಕಳು ದೊಡ್ಡವರಾಗುವ ತನಕ ಅವರನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ತಾರೆ. ಮಗುವನ್ನು ಗಮನಿಸದೇ ಸುಮ್ಮನೇ ಬಿಟ್ಟು ಬಿಟ್ಟರೆ ಅಪಾಯಗಳು ಎದುರಾಗುತ್ತದೆ.24 ತಾಸೂ ಮಕ್ಕಳ ಮೇಲೊಂದು ಕಣ್ಣಿಟ್ಟಿರಲೇಬೇಕು. ನಮ್ಮ ನಿದ್ದೆ, ಊಟ, ವಿಶ್ರಾಂತಿ, ಆಸೆ, ಕನಸು ಎಲ್ಲವನ್ನೂ ಬದಿಗಿಟ್ಟು ಇಡೀ ನಮ್ಮನ್ನು ನಾವು ಮಗುವಿನ ರಕ್ಷಣೆಗೆ ಧಾರೆ ಎರೆದು ನೋಡಿಕೊಳ್ಳುತ್ತಿರಬೇಕು. ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಇಲ್ಲೊಂದು ವಿಡಿಯೋದಲ್ಲಿ ಮಗು ಬಿಯರ್ ಬಾಟಲ್ ಅನ್ನು ಹಿಡಿದಿದೆ. ಮಗು ಅದನ್ನು ಹಾಲಿನ ಬಾಟಲ್ ಎಂದುಕೊಂಡೋ ಏನೋ ಕುಡಿಯುತ್ತದೆ. ಬಳಿಕ ಆ ಮಗು ತಾನು ಕುಳಿತಿದ್ದ ಪುಟ್ಟ ಗಾಡಿಯಿಂದ ಮೇಲೇಳಲು ನೋಡುತ್ತದೆ. ಆದರೆ ನಿಯಂತ್ರಣ ತಪ್ಪಿ ಪಕ್ಕದ ಗಾರ್ಡನ್ಗೆ ಬೀಳುತ್ತದೆ. ಈ ವಿಡಿಯೋವನ್ನು ನೆಟ್ಟಿಗರು ಬೆರಗುಗಣ್ಣಿನಿಂದ ನೋಡ್ತಿದ್ದಾರೆ.