Select Your Language

Notifications

webdunia
webdunia
webdunia
webdunia

ಬಿಜೆಪಿ ಅಜೆಂಡಾ ಭಾವನೆ, ಬದುಕಲ್ಲ ಎಂದು ನಳೀನ್ ಕುಮಾರ್ ಕಟೀಲ್ ವಿರುದ್ಧ ಡಿಕೆಶಿ ವಾಗ್ದಾಳಿ

DKS lashed out at Nalin Kumar Kateel saying that BJP's agenda is emotion and not life
bangalore , ಬುಧವಾರ, 4 ಜನವರಿ 2023 (16:40 IST)
ಬಿಜೆಪಿ ಅಜೆಂಡಾ ಭಾವನೆ, ಬದುಕಲ್ಲ.ಕಾಂಗ್ರೆಸ್ ಅಜೆಂಡಾ ಬದಕು ಕಟ್ಟುವುದು.ಬೆಲೆ ಏರಿಕೆ ಜನರು ತತ್ತರ ಆಗಿದ್ದಾರೆ.ನಾವು ಅವರಿಗೆ ಧ್ವನಿ ಕೊಡಬೇಕು.ಮನಸ್ಸು ಕೆಡಸುವುದು ಅಲ್ಲ.ಕೇವಲ ಹಿಂದೂತ್ವ, ಲವ್ ಜೀಹಾದ್ ಅಜೆಂಡಾ ಮಾಡಿಕೊಂಡಿದ್ದಾರೆ ಎಂದು ನಳಿನ್ ಕುಮಾರ್ ಕಟೀಲ್  ವಿರುದ್ಧ ಡಿಕೆಶಿ ವಾಗ್ದಾಳಿ ನಡೆಸಿದ್ದಾರೆ.
 
ಮನಸ್ಸು ಕೆಡಸುವುದರ ವಿರುದ್ಧ ರಾಹುಲ್ ಗಾಂಧಿ ಪಾದಯಾತ್ರೆ ಮಾಡ್ತಾ ಇದ್ದಾರೆ.ದೇಶ ಒಗ್ಗೂಡಿಸಲು ಪಾದಾರ್ಪಣೆ ಮಾಡ್ತಾ ಇದ್ದಾರೆ.ದೇಶ ಕಟೀಲ್ ಹೇಳಿಕೆ ಖಂಡಿಸುತ್ತೆ.ನಾನು ಒಬ್ಬ ಪಕ್ಷದ ಅಧ್ಯಕ್ಷ ಆಗಿ ಖಂಡಿಸುತ್ತೇನೆ.ನಾವು ಜನರ ಬದಕು ಕಟ್ಟಲು ಹೋರಾಟ ಮಾಡುತ್ತಿದ್ದೇವೆ.ಇದೆ ಬಿಜೆಪಿ ಹಾಗೂ ಕಾಂಗ್ರೆಸ್ ಗೆ ಇರುವ ವ್ಯತ್ಯಾಸ ಎಂದು ಹೇಳಿದ್ರು.
 
ಮೊದಲ ಪಟ್ಟಿ ಬಿಡುಗಡೆ ವಿಚಾರವಾಗಿಯೂ ಡಿಕೆಶಿ ಪ್ರತಿಕ್ರಿಯಿಸಿದ್ದು,ಒಳ್ಳೆಯ ಮುಹೂರ್ತ ಕೂಡಿ ಬರಬೇಕು.ಲಿಸ್ಟ್ ತಾಯಾರಾಗಲು ಒಳ್ಳೆಯ ಸಮಯಬೇಕು.ಜಿಲ್ಲಾ ಕಮಿಟಿಗಳಿಂದ ವರದಿ ಬರಲಿ .ಎರಡು ದಿನದಲ್ಲಿ ವರದಿ ಬರಬೇಕು.ಮೀಟಿಂಗ್ ಮಾಡಿ ಘೋಷಣೆ ಮಾಡುತ್ತೇವೆ.ನಾವು ಕೂಡ ಸರ್ವೆ ಮಾಡಿಸಿದ್ದೇವೆ ಅಭ್ಯರ್ಥಿಗಳ ಬಗ್ಗೆ ಕಾರ್ಯಕರ್ತರ ಅಭಿಪ್ರಾಯ ಪಡಿತಾ ಇದ್ದೇವೆ.೭೮ ಲಕ್ಷ ಕಾಂಗ್ರೆಸ್ ಕಾರ್ಯಕರ್ತರು ಇದ್ದಾರೆ.ಅವರ ಅಭಿಪ್ರಾಯ ಪಡೆದು ಅನೌನ್ಸ್ ಮಾಡುತ್ತೇವೆ ಎಂದು ಡಿಕೆ ಶಿವಕುಮಾರ್ ಹೇಳಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ವಸತಿ ಸಚಿವ ವಿ ಸೋಮಣ್ಣ