ಸಿಎಂ ಬೊಮ್ಮಾಯಿ ಅವರಿಗೆ ನಾಯಿಮರಿ ಎಂಬ ಪದಬಳಕೆ ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಚಿವ ಸೋಮಣ್ಣ ಕಿಡಿಕಾರಿದ್ದಾರೆ.
ವಿಧಾನಸೌಧದಲ್ಲಿ ಸಚಿವ ವಿ.ಸೋಮಣ್ಣ ಪ್ರತಿಕ್ರಿಯಿಸಿದ್ದು,ಸಿಎಂರನ್ನ ನಾಯಿಗೆ ಹೋಲಿಸಿದ ಸಿದ್ದರಾಮಯ್ಯ ವಿರುದ್ಧ ಸೋಮಣ್ಣ ಆಕ್ರೋಶ ವ್ಯಕ್ತಪಡಿಸಿದಾರೆ.2023ಕ್ಕೆ ಮತ್ತೆ ಬೊಮ್ಮಾಯಿ ಮುಖ್ಯಮಂತ್ರಿ ಆಗಲಿದ್ದಾರೆ.ಅವರ ಭಾಷೆಯನ್ನು ಅವರೇ ಕಂಟ್ರೋಲ್ ಮಾಡಿಕೊಳ್ಳೋದು ಉತ್ತಮ.ಬೊಮ್ಮಾಯಿ ರಾಜ್ಯದ ಮುಖ್ಯಮಂತ್ರಿ, ಬಿಜೆಪಿಗಷ್ಟೆ ಮುಖ್ಯಮಂತ್ರಿ ಅಲ್ಲ.ಮುಖ್ಯಮಂತ್ರಿ ಸ್ಥಾನ ಎಲ್ಲರಿಗೂ ಸಿಗಲ್ಲ.ಒಬ್ಬ ಮುಖ್ಯಮಂತ್ರಿ ಆದವರು, 13ಬಜೆಟ್ ಮಂಡಿಸಿದವರು ಇಂತಹ ಭಾಷೆಯನ್ನ ಯಾಕೆ ಬಳಿಸ್ತಾರೋ ಗೊತ್ತಿಲ್ಲ ಎಂದು ಸೋಮಣ್ಣ ಅಸಮಾಧಾನ ಹೊರಹಾಕಿದ್ದಾರೆ.