Publish Date: Tue, 03 Jan 2023 (19:12 IST)
Updated Date: Tue, 03 Jan 2023 (19:13 IST)
ಹೊಸ ವರ್ಷದ ಸಂಭ್ರಮದಲ್ಲಿ BMTCಗೆ ಭರ್ಜರಿ ಆದಾಯ ಸಿಕ್ಕಿದ್ದು, ಮೊದಲೇ ಆರ್ಥಿಕವಾಗಿ ಕುಗ್ಗಿದ್ದ BMTCಗೆ ವರ್ಷದ ಮೊದಲ ದಿನವೇ ಬಂದ ಆದಾಯದಿಂದ ಕಿಕ್ ಸಿಕ್ಕಿದಂತಾಗಿದೆ. ಡಿಸೆಂಬರ್ 31 ಹಾಗೂ ಜನವರಿ 1ರ ಮಧ್ಯರಾತ್ರಿವರೆಗೆ ಹೆಚ್ಚುವರಿಯಾಗಿ 87 ಬಸ್ ಕಾರ್ಯ ನಿರ್ವಹಿಸಿದ್ದು, ಕೇವಲ ಒಂದೇ ದಿನ BMTCಯ ಹೆಚ್ಚುವರಿ ಬಸ್ನಿಂದ 1,99,983 ರೂಗಳಷ್ಟು ಹೆಚ್ಚಿನ ಆದಾಯ ದೊರೆತಿದೆ. ಹೆಚ್ಚುವರಿ ಬಸ್ಗಳು ಸುಮಾರು 4443.9 km ನಷ್ಟು ಸಂಚಾರ ಮಾಡಿದ್ದು, ವರ್ಷದ ಮೊದಲ ದಿನ ಹೆಚ್ಚುವರಿ ಬಸ್ಗಳಲ್ಲಿ ಸುಮಾರು 13,332 ಮಂದಿ ಪ್ರಯಾಣ ಮಾಡಿದ್ದಾರೆ.