Publish Date: Tue, 03 Jan 2023 (19:02 IST)
Updated Date: Tue, 03 Jan 2023 (19:04 IST)
ಹಾವೇರಿಯಲ್ಲಿ ಹೊಸ ವರ್ಷದಂದು ಈಜಲು ತೆರಳಿದ್ದ ಮೂವರು ಯುವಕರು ನೀರು ಪಾಲಾಗಿದ್ದರು. ಇವರಲ್ಲಿ ಓರ್ವನ ಶವ ನದಿ ದಡದಲ್ಲಿ ನೀರಿನಲ್ಲಿ ತೇಲಿ ಬಂದಿದೆ. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಮುದೇನೂರ ಗ್ರಾಮದ ತುಂಗಭದ್ರಾ ನದಿಯ ಪಂಪಹೌಸ್ ಬಳಿ ಯುವಕರು ನೀರುಪಾಲಾಗಿದ್ದರು. ನವೀನ್ ಕುರಗುಂದ, ವಿಕಾಸ ಪಾಟೀಲ್, ನೇಪಾಳ ಮೂಲದ ಪ್ರೇಮ್ ಬೋರಾ ನೀರು ಪಾಲಾಗಿದ್ದರು. ಇಬ್ಬರು ಯುವಕರ ಮೃತದೇಹ ಪತ್ತೆಯಾಗಿಲ್ಲ. ಇವರ ಮೃತದೇಹಕ್ಕಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ನದಿಯಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ.