Select Your Language

Notifications

webdunia
webdunia
webdunia
webdunia

ಉ. ಭಾರತದಲ್ಲಿ 5 ದಿನ ಶೀತಗಾಳಿ

ಉ. ಭಾರತದಲ್ಲಿ 5 ದಿನ ಶೀತಗಾಳಿ
ಪಂಜಾಬ್ , ಮಂಗಳವಾರ, 3 ಜನವರಿ 2023 (18:52 IST)
ಇಂದಿನಿಂದ ಜನವರಿ 7ರವರೆಗೂ ಪಂಜಾಬ್, ಹಿಮಾಚಲ ಪ್ರದೇಶ, ದೆಹಲಿ, ರಾಜಸ್ಥಾನ, ಚಂಡೀಗಢ ಮತ್ತು ಹರಿಯಾಣ ರಾಜ್ಯಗಳಲ್ಲಿ ಶೀತ ಗಾಳಿ ಮತ್ತು ದಟ್ಟವಾದ ಮಂಜು ಆವರಿಸಲಿದೆ. ಈ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದ್ದು, ಭಾರತದ ವಾಯುವ್ಯ ಭಾಗಗಳಲ್ಲಿ 5 ದಿನಗಳ ಶೀತ ಅಲೆಯ ಮುನ್ಸೂಚನೆ ನೀಡಿದೆ. ಮುಂದಿನ 5 ದಿನಗಳಲ್ಲಿ ಮಂಜು ಮತ್ತು ಶೀತ ಗಾಳಿಯ ಪರಿಸ್ಥಿತಿಗಳು ಮುಂದುವರಿಯುವ ಸಾಧ್ಯತೆಯಿದೆ. ಪಂಜಾಬ್, ಹರಿಯಾಣ, ಚಂಡೀಗಢ, ಉತ್ತರ ಪ್ರದೇಶ ಮತ್ತು ಬಿಹಾರ ಸೇರಿದಂತೆ ವಾಯುವ್ಯ ಭಾರತದ ಬಯಲು ಪ್ರದೇಶಗಳಲ್ಲಿ ಈ ವಾತಾವರಣವಿರಲಿದೆ ಎಂದು IMD ಹೇಳಿದೆ. ನಿನ್ನೆಯವರೆಗೂ ಪಂಜಾಬ್ ಮತ್ತು ಹಿಮಾಚಲ ಪ್ರದೇಶದ ಕೆಲವು ಸ್ಥಳಗಳಲ್ಲಿ ಮತ್ತು ರಾಜಸ್ಥಾನದ ಉತ್ತರ ಭಾಗಗಳಲ್ಲಿ ಶೀತ ಅಲೆಗಳ ಪರಿಸ್ಥಿತಿಗಳು ಕಂಡುಬಂದಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರದೀಪ್​ನನ್ನು BJP ಸರ್ಕಾರ ಕೊಲೆ ಮಾಡಿದೆ-ರಣದೀಪ್​​ ಸಿಂಗ್​​ ಸುರ್ಜೇವಾಲ