Publish Date: Mon, 02 Jan 2023 (17:36 IST)
Updated Date: Mon, 02 Jan 2023 (17:39 IST)
ಸೋಷಿಯಲ್ ಮೀಡಿಯಾದಲ್ಲಿ ಏನೆಲ್ಲಾ ವೈರಲ್ ಆಗುತ್ತೆಅಂತ ಹೇಳಲು ಸಾಧ್ಯವಿಲ್ಲ. ನಾವು ಊಹಿಸಲೂ ಬಾರದಂತಹ ಕೆಲವು ಸಂಗತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಸಿಗುತ್ತವೆ. ನೀವು ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಕಾರುಗಳನ್ನು ನೋಡಿರಬಹುದು. ಪೆಟ್ರೋಲ್ ಮತ್ತು ಡೀಸೆಲ್‌ನಲ್ಲಿ ಓಡುವ ಕಾರುಗಳನ್ನು ನಾವು ನೋಡುತ್ತೇವೆ. ಇತ್ತೀಚೆಗೆ ಮಾರುಕಟ್ಟೆಗೆ ಬಂದಿರುವ ಎಲೆಕ್ಟ್ರಿಕ್ ಕಾರುಗಳನ್ನು ನೀವು ನೋಡಿರಬೇಕು. ಆದರೆ ವೈರಲ್ ವಿಡಿಯೋದಲ್ಲಿರುವಂತಹ ಕಾರನ್ನು ನೀವು ಎಲ್ಲಿಯೂ ನೋಡಿಲ್ಲ. ಈ ರಿವರ್ಸ್ ರನ್ನಿಂಗ್ ಕಾರು ಜನರ ಆಕರ್ಷಣೆಯಾಗಿದೆ. ವೀಡಿಯೊದಲ್ಲಿ ಕಾರು ತಲೆಕೆಳಗಾಗಿ ಓಡುತ್ತಿರುವಂತೆ ತೋರುತ್ತಿದೆ, ಅಂದರೆ ಅದರ ಟೈರ್‌ಗಳು ಮೇಲಕ್ಕೆ ಮತ್ತು ಮೇಲ್ಭಾಗವು ಕೆಳಗಿರುತ್ತದೆ. ಆದರೆ ಆ ಕಾರಿನ ವಿನ್ಯಾಸವನ್ನು ಹಾಗೆ ಮಾಡಲಾಗಿದೆ. ವಿನ್ಯಾಸವು ತುಂಬಾ ವಿಶಿಷ್ಟವಾಗಿದೆ, ನೋಡುಗರಿಗೆ ಮನ ಸೆಳೆಯುವಂತಿದೆ. ಈ ವಿಡಿಯೋ ಈಗ ಸಿಕ್ಕಪಟ್ಟೆ ವೈರಲ್ ಆಗಿದೆ.