Publish Date: Wed, 04 Jan 2023 (14:46 IST)
Updated Date: Wed, 04 Jan 2023 (15:08 IST)
ಸಿಎಂ ಬೊಮ್ಮಾಯಿ ಅವರಿಗೆ ನಾಯಿಮರಿ ಎಂಬ ಪದಬಳಕೆ ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಅಶೋಕ್ ಕಿಡಿಕಾರಿದ್ದಾರೆ.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿ ಕೆಲಸಮಾಡಿದ್ದಾರೆ.ಕೀಳು ಪದ ಬಳಕೆ ಅವರ ಸ್ಥಾನಕ್ಕೆ ಗೌರವ ತರುವಂತದ್ದಲ್ಲ.ಈ ಭಾಷೆ ಬಳಸಿ ಕಾಂಗ್ರೆಸ್ ಸಂಸ್ಕೃತಿ ತೋರಿಸಿದೆ.ಈ ಪದ ಬಳಕೆಯ ಮೂಲಕ ಸಂಸ್ಕೃತ ಹೀನ ಎಂದು ತೋರಿಸಿದೆ.ಸಿದ್ದರಾಮಯ್ಯ ಕೀಳುಪದ ಬಳಕೆ ಮಾಡಿದ್ದಾರೆ.ನಾನು ಸಿದ್ದರಾಮಯ್ಯ ಅವರನ್ನ ಕೇಳ್ತೇನೆ.ನೀವು ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಬೇಟಿಗೆ ಹೋಗಿ ಗುಲಾಮಗಿರಿ ತೋರಿಸಿದ್ದೀರಿ.ಡಿಕೆ ಶಿವಕುಮಾರ್ ಮುಂದೆ ಏನಾಗಿದ್ದೀರಿ ನೀವು..?ಡಿಕೆಶಿ ಅವರು ಕೇಳ್ತಾರೆ,ಟಿಕೆಟ್‌ಕೊಡೋ ಅಧಿಕಾರವೇ ಇಲ್ಲ ಅವರ್ಯಾರು ಅಂತಾರೆ.ಡಿಕೆಶಿ ಮುಂದೆಯೇ ಬಾಲ ಬಿಚ್ಚೋಕೆ ಆಗಲ್ಲ ನೀವು.ಕೀಳು ಅಭಿರುಚಿ ಸಂಸ್ಕೃತ ಹೀನ ಪಾರ್ಟಿ ಅಂತಾ ತೋರಿಸಿದ್ದೀರ.ಮುಖ್ಯಮಂತ್ರಿ ಸ್ಥಾನಕ್ಕೆ ಅಗೌರವ ತೋರಿದ್ದೀರಿ.ಕ್ಷಮಾಪಣೆ ಕೇಳುವಂತೆ ಸಿದ್ದರಾಮಯ್ಯಗೆ ಆರ್.ಅಶೋಕ್ ಆಗ್ರಹಿಸಿದ್ದಾರೆ.