Select Your Language

Notifications

webdunia
webdunia
webdunia
webdunia

ಈ ವರ್ಷದಲ್ಲಿ ಮನೆಗಳ್ಳತನ, ರಾಬರಿ, ದುಪ್ಪಟ್ಟು..!

ಈ ವರ್ಷದಲ್ಲಿ ಮನೆಗಳ್ಳತನ, ರಾಬರಿ, ದುಪ್ಪಟ್ಟು..!
bangalore , ಬುಧವಾರ, 4 ಜನವರಿ 2023 (17:55 IST)
ಇಂದು ಬೆಂಗಳೂರು ಕಮಿಷನರ್ ಕಛೇರಿಯಲ್ಲಿ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಸುದ್ದಿಗೋಷ್ಟಿ ನಡೆಸಿದ್ರು.ಪ್ರೆಸ್ ಮೀಟ್ ನಲ್ಲಿ ಸಂಚಾರ ವಿಭಾಗ ವಿಶೇಷ ಆಯುಕ್ತ ಸಲೀಂ,ಸಿಸಿಬಿ ಜಂಟಿ ಕಮಿಷನರ್ ಶರಣಪ್ಪ,ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಬಾಗಿಯಾಗಿದ್ರು.2022 ರಲ್ಲಿ ನಗರದಲ್ಲಿ ನಡೆದ ಅಪರಾದ ಕೃತ್ಯಗಳು,ಎಷ್ಟು ಕೇಸ್ ಸಾಲ್ವ್ ಆಗಿದೆ ಮತ್ತು ಎಷ್ಟು ಕ್ರೈಂ ರೇಟ್ ಇಳಿದಿದೆ ಅನ್ನೊದ್ರ ಮಾಹಿತಿ ನೀಡಿದ್ರು.

ಇನ್ನೂ ಬೆಂಗಳೂರು ನಗರದಲ್ಲಿ 2022 ರಲ್ಲಿ  172 ಕೊಲೆ ಪ್ರಕರಣಗಳು ದಾಖಲಾಗಿದ್ದು.  172  ಕೇಸ್ ಗಳೂ ಕೂಡಾ ಪತ್ತೆಯಾಗಿವೆ. 23 ದರೋಡೆ ಕೇಸ್ ದಾಖಲಾಗಿದ್ದು, 22 ಕೇಸ್ ಪತ್ತೆಯಾಗಿದೆ. ಸರಗಳ್ಳತನ 151 ನಡೆದಿದ್ದು, 134 ಪ್ರಕರಣಗಳನ್ನ ಪತ್ತೆ ಮಾಡಿ ಆರೋಪಿಗಳನ್ನ ಜೈಲಿಗಟ್ಟಲಾಗಿದೆ.ರಾಬರಿ ಪ್ರಕರಣ 478 ನಡೆದಿದ್ದು 352 ಕೇಸ್ ಪತ್ತೆ ಮಾಡಲಾಗಿದೆ.ಮನೆಗಳ್ಳತನ ಹಗಲಲ್ಲಿ ನಡೆದ  179 ರಲ್ಲಿ 70 ಟ್ರೇಸ್ ಆಗಿದೆ.ಮನೆಗಳ್ಳತನ ರಾತ್ರಿ ನಡೆದ 701 ರಲ್ಲಿ 229 ಕೇಸ್ ಟ್ರೇಸ್ ಮಾಡಲಾಗಿದೆ.ವಾಹನ ಕಳ್ಳತನ 5066 ನಡೆದಿದ್ದು 1189 ಕೇಸ್ ಪತ್ತೆ ಮಾಡಲಾಗಿದೆ.ಕಳ್ಳತನ ಪ್ರಕರಣ 2511 ನಡೆದಿದ್ದು 561 ಪ್ರಕರಣ ಪತ್ತೆ ಮಾಡಲಾಗಿದೆ.ಬೆಂಗಳೂರು ನಗರದಲ್ಲಿ 22 ಜನರನ್ನ ಗೂಂಡಾ ಕಾಯ್ದೆಯಡಿ ಬಂದಿಸಲಾಗಿದೆ. 421 ಜೂಜು,201 ಕ್ರಿಕೇಟ್ ಬೆಟ್ಟಿಂಗ್ ಕೇಸ್ ದಾಖಲಿಸಲಾಗಿದೆ. ಇನ್ನೂ ಸೈಬರ್ ಪ್ರಕರಣದಲ್ಲಿ 8,773 ಕೇಸ್‌ ದಾಖಲಾಗಿದ್ದು 7,734 ಪ್ರಕರಣ ಪತ್ತೆಯಾಗಿದ್ದು 13,06,65,134 ಹಣ ರಿಕವರಿ ಮಾಡಲಾಗಿದೆ.

ಇನ್ನು ಸಂಚಾರಿ ವಿಭಾಗದಲ್ಲಿ ಹಲವು ಪ್ರಕರಣ ದಾಖಲಾಗಿದ್ದು,ಸಂಚಾರ ವ್ಯವಸ್ಥೆಯಲ್ಲಿ ಆದ ಪ್ರಕರಣವನ್ನು ನೋಡಾದ್ರೇ ನಗರದಲ್ಲಿ ಒಟ್ಟು 3827 ಅಪಘಾತ ಪ್ರಕರಣಗಳಾಗು ದಾಖಲಾಗಿದಾವೆ.ಮಾರಣಾಂತಿಕ ಹಲ್ಲೆ 748 ಪ್ರಕರಣಗಳಾಗಿದ್ದು. ಇನ್ನೂ ಅಪಘಾತವಾಗಿ  777 ಸಾವನ್ನಪ್ಪಿದ್ದಾರೆ. ಇನ್ನೂ ಅಪಘಾತದಲ್ಲಿ  3235 ಗಾಯಗಳಾಗಿದ್ದಾವೆ.. ಈ ಎದೆನಲ್ಲ ನೋಡಿದ್ದಾಗ ಕಳೆದ ಐದು ವರ್ಷದಲ್ಲಿ ನಗರದಲ್ಲಿ ನಡೆದ ಒಟ್ಟು ಅಪಘಾತ ಪ್ರಮಾಣದಲ್ಲಿ 2018 ಕ್ಕೆ ಹೋಲಿಸಿದರೆ 17% ರಷ್ಟು ಇಳಿಕೆ ಯಾಗಿದೆ.

ಇನ್ನೂ ಸಂಚಾರ ನಿಯಮ ಜಾರಿ ಮಾಡಿದ ವಾಹನಗಳ ವಿರುದ್ದು ದಾಖಲು ಮಾಡಿದ್ದು ನೋಡಾದ್ರೇ ರಸ್ತೆಗಳಲ್ಲಿ ಪೊಲೀಸ್ ಅಧಿಕಾರಿಗಳು ದಾಖಲಿಸಿದ ಪ್ರಕರಣಗಳು 8,27,690  ದಾಖಲಾಗಿವೆ. ಇನ್ನೂ ಕ್ಯಾಮರಾಗಳ ಮೂಲಕ 96,20,595 ಪ್ರಕರಣದಾಖಲುಮಾಡಿದ್ದಾರೆ..ಒಟ್ಟು 1,04,65,124 ಪ್ರಕರಣ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಭಿವೃದ್ಧಿಯೇ ನಮ್ಮ ಅಜೆಂಡಾ- ಆರ್ ಅಶೋಕ್