Publish Date: Thu, 03 Nov 2022 (09:46 IST)
Updated Date: Thu, 03 Nov 2022 (09:49 IST)
ಹೈದರಾಬಾದ್ : ತೆಲಂಗಾಣದ ರಾಜಧಾನಿ ಹೈದ್ರಬಾದ್ ರಸ್ತೆಗಳಲ್ಲಿ ಶೀಘ್ರದಲ್ಲಿಯೇ ಎಲೆಕ್ಟ್ರಿಕ್ ಡಬಲ್ ಡೆಕ್ಕರ್ ಬಸ್ಗಳು ಸಂಚರಿಸಲಿದೆ.
ಹೈದರಾಬಾದ್ಗೆ ಡಬಲ್ ಡೆಕ್ಕರ್ ಬಸ್ಗಳನ್ನು ತರಬೇಕೆಂದು ಬಹು ದಿನಗಳಿಂದ ಬೇಡಿಕೆ ಇತ್ತು. ಈ ಬಗ್ಗೆ ನಗರಾಭಿವೃದ್ಧಿ ಸಚಿವ ಕೆ.ಟಿ. ರಾಮರಾವ್ (ಕೆಟಿಆರ್)ಗೆ ಡಬಲ್ ಡೆಕ್ಕರ್ ಬಸ್ಗಳನ್ನು ಮರಳಿ ತರುವಂತೆ ನೆಟ್ಟಿಗರು ಮನವಿ ಮಾಡುತ್ತಿದ್ದಾರೆ.
ಕೆಟಿಆರ್ ಅವರು ಕೂಡ ಎಲೆಕ್ಟ್ರಿಕ್ ಡಬಲ್ ಡೆಕ್ಕರ್ ಬಸ್ಗಳನ್ನು ವಾಪಸ್ ತರುವುದಾಗಿ ಹೇಳಿದ್ದು, ಶೀಘ್ರದಲ್ಲೇ ಭರವಸೆ ಈಡೇರಿಸುವ ಸಾಧ್ಯತೆ ಇದೆ.
ನಗರದ ಮೂರು ವಿವಿಧ ಮಾರ್ಗಗಳಲ್ಲಿ ಹತ್ತು ಎಲೆಕ್ಟ್ರಾನಿಕ್ ಡಬಲ್ ಡೆಕ್ಕರ್ ಬಸ್ಗಳು ಓಡಾಡಲಿದ್ದು, ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಟಿಎಸ್ಆರ್ಟಿಸಿ) ಇನ್ನೊಂದು ವಾರದಲ್ಲಿ ಇದಕ್ಕಾಗಿ ಟೆಂಡರ್ ಆಹ್ವಾನಿಸಲಿದೆ.