Select Your Language

Notifications

webdunia
webdunia
webdunia
webdunia

ಭಾರತದಲ್ಲಿ ಡಿಜಿಟಲ್ ರುಪಿ ಬಿಡುಗಡೆ

ಭಾರತದಲ್ಲಿ ಡಿಜಿಟಲ್ ರುಪಿ ಬಿಡುಗಡೆ
ಮುಂಬೈ , ಬುಧವಾರ, 2 ನವೆಂಬರ್ 2022 (07:57 IST)
ಮುಂಬೈ : ಬಜೆಟ್ನಲ್ಲಿ ಘೋಷಣೆಯಾದಂತೆ ಭಾರತದಲ್ಲಿ ಡಿಜಿಟಲ್ ರುಪಿ ಅಧಿಕೃತವಾಗಿ ಬಿಡುಗಡೆಯಾಗಿದೆ. ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ ಸಗಟು ಕ್ಷೇತ್ರಕ್ಕೆ ರುಪಿಯನ್ನು ಬಿಡುಗಡೆ ಮಾಡಲಾಗಿದೆ.

ಮುಂದಿನ ದಿನಗಳಲ್ಲಿ ಹಣಕಾಸು ಕ್ಷೇತ್ರದಲ್ಲಿ ಕ್ರಾಂತಿ ಮಾಡಬಹುದು ಎಂದು ವಿಶ್ಲೇಷಣೆಯಾಗುತ್ತಿರುವ ಡಿಜಿಟಲ್ ರುಪಿಯ ಬಗ್ಗೆ ಇಲ್ಲಿ ಕೆಲ ಮಾಹಿತಿಯನ್ನು ನೀಡಲಾಗಿದೆ.

ಏನಿದು ಡಿಜಿಟಲ್ ರುಪಿ?

ಸರಳವಾಗಿ ಹೇಳುವುದಾದರೆ ಡಿಜಿಟಲ್ ರೂಪದಲ್ಲಿರುವ ಹಣ. ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ ಅಥವಾ ಡಿಜಿಟಲ್ ರುಪಿಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಿಡುಗಡೆ ಮಾಡುತ್ತದೆ.

2022ರ ಕೇಂದ್ರ ಬಜೆಟ್ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಡಿಜಿಟಲ್ ಕರೆನ್ಸಿಯನ್ನು ಆರ್ಬಿಐ ಬಿಡುಗಡೆ ಮಾಡಲಿದೆ ಎಂದು ತಮ್ಮ ಭಾಷಣದಲ್ಲಿ ತಿಳಿಸಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಮೋರ್ಬಿ ಸೇತುವೆ ದುರಂತ : ಸಂತ್ರಸ್ತರಿಗೆ ಪ್ರಧಾನಿ ಮೋದಿ ಸಾಂತ್ವನ