Select Your Language

Notifications

webdunia
webdunia
webdunia
webdunia

ಯೋಜನೆ ರೂಪಿಸುವಾಗ ಬಜೆಟ್ ಮಿತಿಯಿರಲಿ : ಸುಪ್ರೀಂಕೋರ್ಟ್

ಯೋಜನೆ ರೂಪಿಸುವಾಗ ಬಜೆಟ್ ಮಿತಿಯಿರಲಿ : ಸುಪ್ರೀಂಕೋರ್ಟ್
ನವದೆಹಲಿ , ಬುಧವಾರ, 6 ಏಪ್ರಿಲ್ 2022 (14:28 IST)
ನವದೆಹಲಿ : ಜನಕಲ್ಯಾಣ ಯೋಜನೆ ಅಥವಾ ಕಾನೂನುಗಳನ್ನು ರೂಪಿಸುವಾಗ ಸರ್ಕಾರಗಳು ರಾಜ್ಯದ ಬೊಕ್ಕಸದ ಮೇಲೆ ಬೀರಬಹುದಾದ ಆರ್ಥಿಕ ಪರಿಣಾಮವನ್ನು ಗಣನೆಗೆ ತೆಗೆದುಕೊಳ್ಳಬೇಕು.
 
ಅದಕ್ಕಾಗಿ ಯೋಜನೆಗಳಿಗೆ ಬಜೆಟ್ ಅನುದಾನವನ್ನು ಮಿತಿಗೊಳಿಸಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ.

ಈ ವಿಚಾರದಲ್ಲಿ ದೂರದೃಷ್ಟಿ ಇಲ್ಲದೇ ಇರುವುದಕ್ಕೆ ಉತ್ತಮ ಉದಾಹರಣೆ ಶಿಕ್ಷಣ ಹಕ್ಕು ಕಾಯ್ದೆ ಎಂದು ನ್ಯಾಯಮೂರ್ತಿಗಳಾದ ಯು.ಯು.ಲಲಿತ್, ಎಸ್.ರವೀಂದ್ರಭಟ್ ಮತ್ತು ಪಿ.ಎಸ್.ನರಸಿಂಹ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಅಭಿಪ್ರಾಯಪಟ್ಟಿದೆ.

ಶಿಕ್ಷಣದ ಹಕ್ಕು ಒಳ್ಳೆಯ ಉದಾಹರಣೆ ಕಾಯ್ದೆಯಾಗಿ ರೂಪಿಸಲಾಗಿದೆ. ಆದರೆ ಶಾಲೆಗಳು ಎಲ್ಲಿವೆ? ರಾಜ್ಯ ಸರ್ಕಾರಗಳಿಗೆ ಶಿಕ್ಷಕರು ಎಲ್ಲಿಂದ ದೊರೆಯಬೇಕು? ಸಿಬ್ಬಂದಿಯನ್ನು ರೂಪಿಸುವುದು ಹೇಗೆ? ಎಂಬುದನ್ನೂ ತಿಳಿದಕೊಳ್ಳಬೇಕು ಕಿವಿಮಾತು ಹೇಳಿದೆ. 

ಇದನ್ನು ಇಡಿಯಾಗಿ ಪರಿಗಣಿಸಬೇಕು. ಈ ನಿಟ್ಟಿನಲ್ಲಿ ಕೆಲಸ ಮಾಡಿ, ಇಲ್ಲದಿದ್ದರೆ ಇದು ಕೇವಲ ಬಾಯಿಮಾತಿನ ಕೆಲಸವಾಗುತ್ತದೆ ಎಂದು ಲಲಿತ್ ಸಲಹೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ಹೇಳಿಕೆಯನ್ನು ತಪಾಗಿ ಅರ್ಥೈಸಿಕೊಳಲಾಗಿದೆ - ಗೃಹ ಸಚಿವ ಆರಗ ಜ್ಞಾನೇಂದ್ರ