Publish Date: Sun, 04 Dec 2022 (19:45 IST)
Updated Date: Sun, 04 Dec 2022 (19:52 IST)
ಬೀಗ ಹಾಕಿದ ಮನೆಗಳನ್ನೇ ಗುರಿಯಾಗಿಸಿ ಹಾಡಹಗಲೇ ಮನೆಗಳ್ಳತನ ಮಾಡುತ್ತಿದ್ದ ದಂಪತಿಯನ್ನು ಜ್ಞಾನಭಾರತಿ ಪೊಲೀಸರು ಸೆರೆಹಿಡಿದಿದ್ದಾರೆ.ನಾಗರಾಜ್ ಹಾಗೂ ರಮ್ಯ ಬಂಧಿತ ದಂಪತಿಯಾಗಿದ್ದು ಇವರಿಂದ 65 ಗ್ರಾಂ ಚಿನ್ನ, 50 ಗ್ರಾಂ ಬೆಳ್ಳಿ, ಎರಡು ಬೈಕ್ ಹಾಗೂ ಮೊಬೈಲ್ ಗಳನ್ನ ವಶಕ್ಕೆ ಪಡೆದುಕೊಳ್ಳಲಾಗಿದೆ. ಮೈಸೂರು ಮೂಲದ ರಮ್ಯ ಹಾಗೂ ಉತ್ತರಹಳ್ಳಿ ನಾಗರಾಜ್ ಇಬ್ಬರು ಕೆಲ ವರ್ಷಗಳ ಹಿಂದೆ ಇನ್ ಸ್ಟ್ರಾಗ್ರಾಮ್ ಮೂಲಕ ಪರಿಚಯವಾಗಿ ಇಬ್ಬರು ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದರು. ಈ ನಡುವೆ ರಮ್ಯ ಹಾಗೂ ನಾಗರಾಜ್ ಸ್ನೇಹಿತರು ಕಳ್ಳತನ ಹಾದಿ ಹಿಡಿದಿದ್ದನ್ನು ದಂಪತಿ ಸಹ ಕಳ್ಳತನ ದಾರಿ ಹಿಡಿದಿದ್ದರು. ಹಾಡಹಾಗಲೇ ಬೀಗದ ಹಾಕಿದ ಮನೆಗಳನ್ನೇ ಟಾರ್ಗೆಟ್ ಮಾಡಿಕೊಂಡಿದ್ದರು. ಮನೆಯೊಳಗೆ ನಾಗರಾಜ್ ಹೋದರೆ ಹೊರಗಡೆ ರಮ್ಯ ಗಸ್ತು ಕಾಯುತ್ತಿದ್ದಳು. ಯಾರಾದರೂ ಬಂದರೆ ಸಿಗ್ನಲ್ ಕೊಟ್ಟು ಇಬ್ಬರು ಎಸ್ಕೇಪ್ ಆಗುತ್ತಿದ್ದರು. ಇದೇ ರೀತಿ ದಂಪತಿಯು ಮಾದನಾಯಕಹಳ್ಳಿ, ಆರ್.ಆರ್.ನಗರ ಹಾಗೂ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಾಲ್ಕು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.