Select Your Language

Notifications

webdunia
webdunia
webdunia
webdunia

ವಿನೂತನ ಪ್ರಯತ್ನಕ್ಕೆ ಕೈ ಹಾಕಿದ ಬಿಬಿಎಂಪಿ

ವಿನೂತನ ಪ್ರಯತ್ನಕ್ಕೆ ಕೈ ಹಾಕಿದ ಬಿಬಿಎಂಪಿ
bangalore , ಭಾನುವಾರ, 4 ಡಿಸೆಂಬರ್ 2022 (19:06 IST)
ಸಂಜೆಯಾಗುತ್ತಿದ್ದಂತೆ ಬೆಂಗಳೂರಿನ ಜನತೆಗೆ ಕೆಲವುಕಡೆ ಹೋಗಕ್ಕೆ ಭಯವಾಗುತ್ತದೆ. ಸರಿಯಾದ ಬೀದಿ ದೀಪವಿಲ್ಲದೆ ಸಾರ್ವಜನಿಕರು ಪರದಾಡುವಂತಾಗಿದೆ. ಬೀದಿ ದೀಪ ಇದ್ದರೂ ಸಹ ಬೆಳಕನ್ನೇ ಕಾಣದೆ ಜನರಿಗೆ  ಸಮಸ್ಯೆಯಾಗುತ್ತಿದೆ. ಆದ್ರೆ ಇದೀಗ ಇದೆಲ್ಲದಕ್ಕ ಫುಲ್ ಸ್ಟಾಪ್ ಹಾಕಲು ಬಿಬಿಎಂಪಿ ಭರ್ಜರಿ ಪ್ಲಾನ್ ಮಾಡಿದೆ.

ಬೆಂಗಳೂರಿನ ಹಲವಾರು ಏರಿಯಗಳಲ್ಲಿ ಹಳೆಯ ಸಾಂಪ್ರದಾಯಿಕ ಸೋಡಿಯಂ, ಟ್ಯೂಬ್ಲೈಟ್, ಸಿಎಫ್ಎಲ್, ಎಚ್ಪಿ ಸೋಡಿಯಂ ನಂತಹ ಬೀದಿ ದೀಪಗಳದೇ ದರ್ಬಾರ್ ಆಗಿವಿ. ವರ್ಷಾನುಗಟ್ಟಳೇ ಕಳೆದರೂ ಸಹ ದೀಪಗಳ ನವೀಕರಣ ಮಾಡದ ಕಾರಣ ರಸ್ತಗಳು ಕತ್ತಲೆಗೆ ಸರಿಯುತ್ತಿವೆ.ಇವುಗಳ ಜಾಗದಲ್ಲಿ ಹೊಸ ಸ್ಮಾರ್ಟ್ ಎಲ್ಇಡಿ ಬೀದಿದೀಪಗಳು ಪ್ರಖರವಾಗಿ ಬೆಳಗಿ, ನಗರದ ಅಂದಕ್ಕೆ ಮೆರಗು ತುಂಬಲು ಬಿಬಿಎಂಪಿ ಸಜ್ಜಾಗಿದೆ . 

ರಾತ್ರಿ ವೇಳೆ ಸಂಚರಿಸುವ ಸಾರ್ವಜನಿಕರಿಗೆ ಬೀದಿ ದೀಪ ಇಲ್ಲದೆ ತೊಂದರೆಯಾಗುತ್ತಿತ್ತು. ಇದರ ಜತೆಗೆ ದೀಪಗಳು ಇಲ್ಲದ ಕಾರಣ ಅಪರಾಧ ಕೃತ್ಯಗಳಿಗೂ ಸಹ ದಾರಿಯಾಗುತಿತ್ತು. ಇದೀಗ  ಎಲ್ಇಡಿ ವಿದ್ಯುತ್ ದೀಪಗಳ ಅಳವಡಿಕೆಯಿಂದ ಇದಕ್ಕೆಲ್ಲಾ ಕಡಿವಾಣ ಹಾಕಲು ಮುಂದಾಗಿದ್ದಾರೆ..ಹಳೆ ಮಾದರಿಯ ಬೀದಿ ದೀಪದ ಬದಲಿಗೆ ಎಲ್ಇಡಿ ಬೀದಿ ದೀಪವನ್ನು ಅಳವಡಿಸಲು ಬಿಬಿಎಂಪಿ ಪ್ಲಾನ್ ಮಾಡಿದ್ದು ಇದರಿಂದ ಬೆಂಗಳೂರಿನ ಜನತೆಗೆ  ಮತ್ತಷ್ಟು ಬೆಳಕು ನೀಡುವುದರ ಜೊತೆಗೆ ಎಲೆಕ್ಟ್ರಿಸಿಟಿ ಖರ್ಚನ್ನು ಕಡಿಮೆ ಮಾಡಲು ಮುಂದಾಗಿದೆ . ಪ್ರಸ್ತುತ ಎಷ್ಟು ವಿದ್ಯುತ್ ಬಳಕೆ ಆಗುತ್ತಿದೆ ಎಂಬುದನ್ನು ಆಧಾರವಾಗಿ ಇರಿಸಿಕೊಂಡು ಎಲ್ಇಡಿ ಬಳಕೆಯಿಂದ ಎಷ್ಟು ಉಳಿತಾಯ ಮಾಡಬಹುದು ಎಂಬ ಲೆಕ್ಕಚಾರ ಹಾಕಿಕೊಂಡು ಈ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದೆ.

ಕತ್ತಲಾಗುತ್ತಿದಂತೆಯೇ ಎಲ್ಇಡಿ ಬೀದಿದೀಪಗಳು ಬೆಳಕು ಚೆಲ್ಲಿ, ಮುಂಜಾನೆ ಬೆಳಕು ಹರಿಯುತ್ತಿದ್ದಂತೆ ಸ್ಥಗಿತವಾಗಲಿವೆ. ಇದರಿಂದ ಅನಗತ್ಯ ವಿದ್ಯುತ್ ಪೋಲಾಗುವುದು ತಪ್ಪಲಿದೆ. ಈ ಮೂಲಕ ಶೇ 62ರಷ್ಟು ವಿದ್ಯುತ್ ಶುಲ್ಕ ಮತ್ತು ಬಳಿಕೆ ಪ್ರಮಾಣ ಉಳಿಯಲಿದೆ ಎಂಬುದು ಪಾಲಿಕೆಯ ಅಂದಾಜು ಎಂದು ಬಿಬಿಎಂಪಿಯ ಚೀಫ್ ಇಂಜಿನಿಯರ್ ಪ್ರಹ್ಲಾದ್ ತಿಳಿಸಿದ್ದಾರೆ.ಮಹಾನಗರ ಪಾಲಿಕೆಗೆ ವಿದ್ಯುತ್ ಮಿತವ್ಯಯದ ಜತೆಗೆ ಹಣದ ಉಳಿತಾಯಕ್ಕೂ ಇವು ದಾರಿದೀಪವಾಗಲಿವೆ .ಮುಂದಿನ ದಿನಗಳಲ್ಲಿ ಸ್ಮಾರ್ಟ್ ಎಲ್ಇಡಿ ದೀಪಗಳ ಬೆಳಕಲ್ಲಿ ಇಡೀ  ಐಟಿ ಸಿಟಿ ಝಗಮಗಿಸುವುದಂತು ಖಂಡಿತ.

Share this Story:

Follow Webdunia kannada

ಮುಂದಿನ ಸುದ್ದಿ

ಲಕ್ಷಾಂತರ ರೂಪಾಯಿ ದೋಚಿದ್ದ ಕಳ್ಳರು ಅಂದರ್