Select Your Language

Notifications

webdunia
webdunia
webdunia
webdunia

ಲಕ್ಷಾಂತರ ರೂಪಾಯಿ ದೋಚಿದ್ದ ಕಳ್ಳರು ಅಂದರ್

ಲಕ್ಷಾಂತರ ರೂಪಾಯಿ ದೋಚಿದ್ದ ಕಳ್ಳರು ಅಂದರ್
bangalore , ಭಾನುವಾರ, 4 ಡಿಸೆಂಬರ್ 2022 (18:56 IST)
ಮೋಜು ಮಸ್ತಿ ಮಾಡಲು ಬಿಗ್ರೇಡ್ ರೋಡ್ ಗೆ ಹೋಗಿದ್ದ ಟೆಕ್ಕಿಯನ್ನ ಅಪಹರಿಸಿ ಲಕ್ಷಾಂತರ ರೂಪಾಯಿ ದೋಚಿದ್ದ ನಾಲ್ವರು ಅಪಹರಣಕಾರರನ್ನು ಅಶೋಕನಗರ ಪೊಲೀಸರು ಸೆರಹಿಡಿದಿದ್ದಾರೆ.ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ರಾಹುಲ್  ವೈರಾಧ್ಯನನ್ನ ಅಪಹರಿಸಿದ ಆರೋಪದಡಿ ತರುಣ್ ಗಣೇಶ್, ಮಣಿಕಂಠ, ವಿಘ್ನೇಶ್ ಹಾಗೂ ಚೇರಿಶ್ ಎಂಬುವರನ್ನು ಬಂಧಿಸಲಾಗಿದೆ. ಹೂಡಿಯ ಸೀತರಾಮಪಾಳ್ಯ ನಿವಾಸಿಯಾಗಿರುವ ರಾಹುಲ್ ಕಳೆದ ತಿಂಗಳು 26ರಂದು ಕಾರಿನಲ್ಲಿ ಕಲ್ಯಾಣ ನಗರಕ್ಕೆ ತೆರಳಿ ಅಲ್ಲೇ ಕಾರು ಪಾರ್ಕಿಂಗ್ ಮಾಡಿ ಚಾಲಕನಿಗೆ ತಿಳಿಸಿ ಅಲ್ಲಿಂದ ಆಟೊದಲ್ಲಿ ಮೋಜು-ಮಸ್ತಿ ಮಾಡಲು ಅಂದು ಮಧ್ಯರಾತ್ರಿ 3 ಗಂಟೆ ಸುಮಾರಿಗೆ ಬಿಗ್ರೇಡ್ ರೋಡ್ ತೆರಳಿದಿದ್ದರು‌. ಈ ವೇಳೆ ವ್ಯಕ್ತಿಯೋರ್ವ ಪರಿಚಯವಾಗಿ ತನ್ನ ಮೊಬೈಲ್ ನಲ್ಲಿದ್ದ ಯುವತಿಯರ ಪೋಟೊ ತೋರಿಸಿದ್ದಾನೆ‌. ಇಷ್ಟವಿಲ್ಲ ಎಂದು ಹೇಳಿ ಆಟೊ ಚಾಲಕನಿಗೆ ತಿಳಿಸಿ ಮತ್ತೆ ಕಲಾಣ್ಯನಗರಕ್ಕೆ ಹೋಗುವಾಗ ಮಾರ್ಗ ಮಧ್ಯೆ ಹಿಂಬದಿಯಿದ ಆರೋಪಿಗಳು ಫಾಲೋ ಮಾಡುತ್ತಿರುವುದನ್ನ ಗಮನಿಸಿದ್ದ ರಾಹುಲ್, ಪೊಲೀಸ್ ಸ್ಟೇಷನ್ ಕಡೆ ಹೋಗುವಂತೆ ಆಟೊ ಚಾಲಕನಿಗೆ ಸೂಚಿಸಿದ್ದ. ಇದರಂತೆ ಹೋಗುವಾಗ ಸೆಂಟ್ರಲ್ ಮಾಲ್ ಬಳಿ ದುಷ್ಕರ್ಮಿಗಳು ಆಟೊ‌ ಅಡ್ಡಗಟ್ಟಿ ರಾಹುಲ್‌ ನನ್ನ ಕಾರಿನಲ್ಲಿ ಅಪಹರಿಸಿದ್ದಾರೆ. ರಾತ್ರಿಪೂರ್ತಿ ಕೆ.ಆರ್.ಪುರ,ಬೆಳ್ಳಂದೂರು, ಎಲೆಕ್ಟ್ರಾನಿಕ್ ಸಿಟಿ ಸೇರಿ ವಿವಿಧ ಕಡೆಗಳಲ್ಲಿ‌ ಸುತ್ತಾಡಿಸಿ ರಾಹುಲ್ ಬಳಿಯಿದ್ದ ಚಿನ್ನಾಭರಣ ಕಸಿದಿದ್ದಾರೆ. ಎಟಿಎಂ ಕಾರ್ಡ್ ಗಳ ಮುಖಾಂತರ ಲಕ್ಷಾಂತರ ರೂಪಾಯಿ ಹಣ ಬಿಡಿಸಿಕೊಂಡಿದ್ದಾರೆ.‌ಅಲ್ಲದೆ‌ ರಾಹುಲ್ ಸಹೋದರರಿಗೆ ಕರೆ ಮಾಡಿಸಿ ಮತ್ತೆ ಎರಡು ಲಕ್ಷ ರೂಪಾಯಿ ಪಡೆದುಕೊಂಡು ಬೆಳಗ್ಗೆ ಕಲ್ಯಾಣನಗರಕ್ಕೆ ಬಿಟ್ಟು ಹೋಗಿದ್ದರು‌. ಚಿನ್ನಾಭರಣ ಸೇರಿ‌ ಒಟ್ಟು 10 ಲಕ್ಷ ರೂಪಾಯಿ ಹಣ ಕಸಿದಿದ್ದಾರೆ ಎಂದು ದೂರು ನೀಡಿದ ಮೇರೆಗೆ ನಾಲ್ವರು ಅಪಹರಣಕಾರರನ್ಮು ಹಡೆಮುರಿಕಟ್ಟುವಲ್ಲಿ ಅಶೋಕ ನಗರ ಪೊಲೀಸರು ಯಶಸ್ಚಿಯಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನೆಲ,ಜಲ ಭಾಷೆ ವಿಷಯಕ್ಕೆ ಬಂದ್ರೆ ನಾವು ಸುಮ್ಮನಿರಲ್ಲ- ಮಹೇಶ್ ಕುಮಟಳ್ಳಿ