Select Your Language

Notifications

webdunia
webdunia
webdunia
webdunia

ಭೀಕರವಾಗಿ ಕೊಲೆಯಾದ ಸಿಸಿಟಿವಿ ದೃಶ್ಯ ಆಧಾರಿಸಿ ಪೊಲೀಸರ ತನಿಖೆ

ಭೀಕರವಾಗಿ ಕೊಲೆಯಾದ ಸಿಸಿಟಿವಿ ದೃಶ್ಯ ಆಧಾರಿಸಿ ಪೊಲೀಸರ ತನಿಖೆ
bangalore , ಭಾನುವಾರ, 4 ಡಿಸೆಂಬರ್ 2022 (18:20 IST)
ರಾಜಧಾನಿಯಲ್ಲಿ ಯುವಕನನ್ನ ಹಂತಕರು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.ಸುಮಾರು 30 ವರ್ಷದ ವ್ಯಕ್ತಿಯನ್ನ ಭೀಕರ ಕೊಲೆ ಮಾಡಲಾಗಿದೆ‌. ಕೆಪಿ ಅಗ್ರಹಾರದ ಹೇಮಂತ್ ಮೆಡಿಕಲ್ ಬಳಿ ಕಳೆದ ರಾತ್ರಿ 12.30 ರ ಸುಮಾರಿಗೆ ನಡೆದಿದೆ‌. ಕೊಲೆಯಾದ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ.
ಮೂವರು ಪುರುಷರು ಹಾಗೂ ಮೂವರು ಮಹಿಳೆಯರು ಕೃತ್ಯದಲ್ಲಿ ಭಾಗಿಯಾಗಿರುವ ಬಗ್ಗೆ ತಿಳಿದುಬಂದಿದೆ.ಪರಿಚಯಸ್ಥರೇ ಹತ್ಯೆ ಮಾಡಿರುವುದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಮೃತನ ಹೆಸರು, ವಿಳಾಸ   ಇನ್ನು ಪತ್ತೆಯಾಗಿಲ್ಲ.. ಹತ್ಯೆಗೆ ನಿಖರ ಕಾರಣ ಗೊತ್ತಾಗಿಲ್ಲ. ಕಲ್ಲಿನಿಂದ ಜಜ್ಜಿ ಅನಾಮಿಕನನ್ನ ಹತ್ಯೆ ಮಾಡಿರುವುದು ಗೊತ್ತಾಗಿದೆ. ಸದ್ಯ ಮೃತದೇಹ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ತಿಳಿಸಿದ್ದಾರೆ. ಇನ್ನೂ ಘಟನಾ ಸ್ಥಳಕ್ಕೆ ಶ್ವಾನದಳ ಸಿಬ್ಬಂದಿ ತಪಾಸಣೆ ನಡೆಸುತ್ತಿದೆ. ಘಟನಾ ಸ್ಥಳದ ಸುತ್ತಮುತ್ತಾ ಸಿಸಿಟಿವಿ ಕ್ಯಾಮರ ದೃಶ್ಯಾವಳಿಯನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಎಲ್ಲಂದ್ರೆ ಅಲ್ಲಿ ಬೈಕ್‌ ಕಾರು ನಿಲ್ಲಿಸಿದ್ರೆ ಎಫ್ ಐ ಆರ್ ಆಗೋದು ಗ್ಯಾರೆಂಟಿ,