Select Your Language

Notifications

webdunia
webdunia
webdunia
webdunia

ಎಲ್ಲಂದ್ರೆ ಅಲ್ಲಿ ಬೈಕ್‌ ಕಾರು ನಿಲ್ಲಿಸಿದ್ರೆ ಎಫ್ ಐ ಆರ್ ಆಗೋದು ಗ್ಯಾರೆಂಟಿ,

ಎಲ್ಲಂದ್ರೆ ಅಲ್ಲಿ ಬೈಕ್‌ ಕಾರು ನಿಲ್ಲಿಸಿದ್ರೆ ಎಫ್ ಐ ಆರ್  ಆಗೋದು ಗ್ಯಾರೆಂಟಿ,
bangalore , ಭಾನುವಾರ, 4 ಡಿಸೆಂಬರ್ 2022 (18:12 IST)
ಬೆಂಗಳೂರಿನ ಜನಕ್ಕೆ ಟ್ರಾಫಿಕ್ ಸಮಸ್ಯೆ ಒಂದು ಕಡೆ ಆದ್ರೆ ಇತ್ತ  ಪಾರ್ಕಿಂಗ್ ಸಮಸ್ಯೆ ಕೂಡ ಅಷ್ಟೇ ಇದೆ. ಎಲ್ಲಂದ್ರಲ್ಲಿ ಗಾಡಿಗಳನ್ನು ನಿಲ್ಲಿಸಿದ್ರೆ ಇನ್ನುಮಂದೆ ಫೈನ್ ಅಷ್ಟೇ ಅಲ್ಲ ಅದರ ಜೊತೆಗೆ ಎಫ್.ಐ.ಆರ್‌ ಕೂಡ ಫೈಲ್ ಮಾಡ್ತಾರೆ.
 
 ಬೆಂಗಳೂರಿನ ಜನರು ಇಷ್ಟು ದಿನ  ಟೋಯಿಂಗ್ ಇಲ್ಲ ಅಂತ ಆರಾಮಾಗಿ ಪಾರ್ಕಿಂಗ್ ಪಾಡ್ತಾಯಿದ್ರು. ನಮ್ಮ ಗಾಡಿಯನ್ನು ಯಾರು ಟಚ್‌‌ ಮಾಡಲ್ಲ ಅಂತ ಸುಮ್ಮನಿದ್ರು. ಆದ್ರೆ ಇನ್ನು ಮುಂದೆ ಈ ರೀತಿಯಾಗಿ ನೀವು ಯೋಚನೆ ಮಾಡಿದ್ರೆ ನಿಮ್ಮ ಮೇಲೆಯೇ ಎಫ್.ಐ.ಆರ್ ದಾಖಲಾಗತ್ತೆ. ಹೌದು. ‌ಎಲ್ಲಂದ್ರೆ ಅಲ್ಲಿ ಬೈಕ್‌ ಕಾರು ನಿಲ್ಲಿಸಿದ್ರೆ ಎಫ್ ಐ ಆರ್  ಆಗೋದು ಗ್ಯಾರೆಂಟಿ.
ಹೊಸ ಸಂಚಾರಿ ಸ್ಪೆಷಲ್ ಕಮೀಷನರ್ ಈ ಬಗ್ಗೆ ಖಡಕ್ ಎಚ್ಚರಿಗೆ ನೀಡಿದ್ದಾರೆ.ಜನ ಸಾಮಾನ್ಯರಿಗೆ ತೊಂದರೆ ಆದ್ರೆ ಅಂತವರ ವಿರುದ್ಧ ಶಿಸ್ತು ಬದ್ಧ ಕ್ರಮ ಕೈಗೊಳ್ತೀವಿ ಅಂತ ಹೇಳಿದ್ದಾರೆ.
 
ಟೋಯಿಂಗ್ ಇಲ್ಲ ಅಂತ ನೋ ಪಾರ್ಕಿಂಗ್ ನಲ್ಲಿ ಗಾಡಿ ಪಾರ್ಕ್ ಮಾಡಿದ್ರೆ ಅಂತವರ‌ ವಿರುದ್ಧ
ಐಪಿಸಿ ಸೆಕ್ಷನ್ 283 ಅಡಿಯಲ್ಲಿ ನೋಪಾರ್ಕಿಂಗ್ ಗಾಡಿಗಳ ಮೇಲೆ ಕೇಸ್ ದಾಖಲಿಸಿ ಎಫ್ ಐ ಆರ್ ದಾಖಲು ಮಾಡ್ತಾರೆ.ಐಪಿಸಿ ಸೆಕ್ಷನ್ 283 ಸಾರ್ವಜನಿಕ ಸುಗಮ ಸಂಚಾರಕ್ಕೆ ಅಡ್ಡಿಪಡಿಸುವುದು. ಇದನ್ನೆ ಬಳಸಿಕೊಂಡು ನೋ ಪಾರ್ಕಿಂಗ್ ಗಾಡಿಗಳ ಮೇಲೆ  ಎಫ್ ಐ ಆರ್ ಹಾಕಿ ಗಾಡಿ ಸೀಜ್ ಮಾಡುಲಾಗತ್ತೆ.ಎಫ್ ಐ ಆರ್ ಹಾಕಿ ಗಾಡಿ ಸೀಜ್ ಮಾಡಿದ್ರೆ ನ್ಯಾಯಾಲಯದಲ್ಲಿ ದಂಡ ಕಟ್ಟಿ ಗಾಡಿ ಬಿಡಿಸಿಕೊಳ್ಳಬೇಕು ಇದ್ರಿಂದ ತುಂಬಾನೆ ಹುಷಾರಾಗಿ ಇರೋದು ತುಂಬಾ ಮುಖ್ಯ
 
ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಕಟ್ಟುನಿಟ್ಟಾಗಿ ಕ್ರಮ ತೆಗೆದುಕೊಂಡಿದ್ದು  ಎಂ ಎ ಸಲೀಮ್ ರವರು, 
ಸದ್ಯ ಟೋಯಿಂಗ್ ಜಾರಿ ಇಲ್ಲ, ಆದ್ರೆ ಎಲ್ಲಂದ್ರಲ್ಲಿ ಗಾಡಿ ನಿಲ್ಲಿಸಿದ್ರೆ ಪೊಲೀಸರು ಸುಮ್ಮನಿರಲ್ಲ ಅಂತ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.. ಒಟ್ಟಿನಲ್ಲಿ ಗಾಡಿ ಮೇಲೆ ಎಫೇಐಆರ್ ಆಗುವ ಮುಂಜೆ‌ ಜಾಗೃತವಾಗಿ ನಿಮ್ಮ ನಿಮ್ಮ ಗಾಡಿಗಳನ್ನು ನೊಡಿಕೊಳ್ಳೊವುದೇ ಸೂಕ್ತ .

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನಲ್ಲಿ 30 ವರ್ಷದ ವ್ಯಕ್ತಿಯ ಭೀಕರ ಕೊಲೆ