Publish Date: Wed, 04 Jan 2023 (18:03 IST)
Updated Date: Wed, 04 Jan 2023 (18:08 IST)
ಪ್ರಾಣಿ-ಪಕ್ಷಿಗಳೂ ಸಹ ಕರಿದ ತಿಂಡಿ-ತಿನಿಸುಗಳನ್ನು ಇಷ್ಟಪಟ್ತವೆ. ಅವುಗಳಿಗೆ ಕಾಳು-ಕಡ್ಡಿ ತಿಂದು ಬೋರ್ ಆಗಿದೆ ಎಂದು ಕಾಣುತ್ತೆ. ಮನುಷ್ಯನು ಟ್ರಿಪ್ ಹೋಗುವಾಗ ದಾರಿಯಲ್ಲಿ ಇರುವ ಕೋತಿ, ಶ್ವಾನಗಳು, ಹಕ್ಕಿಗಳಿಗೆ ಏನಾದರೂ ಕುರುಕು ತಿಂಡಿಗಳನ್ನು ನೀಡ್ತಿರುತ್ತಾನೆ. ಇದರ ರುಚಿ ಕಂಡ ಅವುಗಳು ಕಾಡಿಗೆ ವಾಪಾಸ್ ತೆರಳದೇ, ರೋಡ್ಗಳಿಗೆ ಬಂದು ತಿಂಡಿ, ತಿನಿಸಿಗಾಗಿ ಕಾಯ್ತಿರುತ್ತವೆ. ಇದರಿಂದ ಎಷ್ಟೋ ಪ್ರಾಣಿಗಳಿಗೆ ಅಪಘಾತವಾಗಿ, ಹಲವು ಪ್ರಾಣಿಗಳು ಸಾವನಪ್ಪಿವೆ. ಇವುಗಳ ಸಾವಿಗೆ ಮನುಷ್ಯನೇ ನೇರ ಹೊಣೆ. ಇಲ್ಲೊಂದು ಯೂರೋಪಿಯನ್ ಗಿಲ್ ಎಂಬ ಪಕ್ಷಿ ಅಂಗಡಿಗೆ ಬಂದಿದೆ. ಈ ಪಕ್ಷಿ ಅಂಗಡಿ ಬಾಗಿಲಿಗೆ ಬರಲು ಶಾಪ್ನ ಸೆನ್ಸಾರ್ ಬಾಗಿಲು ಓಪನ್ ಆಗುತ್ತದೆ. ಬಳಿಕ ಈ ಪಕ್ಷಿ ಒಳಗೆ ಹೋಗಿ ಒಂದು ಚಿಪ್ಸ್ ಪ್ಯಾಕ್ ಅನ್ನು ಕದ್ದು ತರುತ್ತದೆ. ಹೊರಗೆ ತಂದು ಕೊಕ್ಕಿನಿಂದ ಪ್ಯಾಕೆಟ್ ಓಪನ್ ಮಾಡಿ, ಒಳಗಿನ ಚಿಪ್ಸ್ ಅನ್ನು ತಿನ್ನುತ್ತದೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.