Select Your Language

Notifications

webdunia
webdunia
webdunia
webdunia

ವೈನ್ ಭದ್ರತಾ ಚೀಟಿ ವೆಚ್ಚ ಹಿಂಪಡೆದ ಸರ್ಕಾರ

ವೈನ್ ಭದ್ರತಾ ಚೀಟಿ ವೆಚ್ಚ ಹಿಂಪಡೆದ ಸರ್ಕಾರ
bangalore , ಸೋಮವಾರ, 26 ಜೂನ್ 2023 (20:01 IST)
ವೈನ್ ಭದ್ರತಾ ಚೀಟಿ ವೆಚ್ಚವನ್ನ ಸರ್ಕಾರ ಹಿಂಪಡೆದಿದೆ. ಮದ್ಯದ ಬಾಟಲಿಗಳ ಮುಚ್ಚಳದ ಮೇಲೆ ಅಂಟಿಸುವ ಅಬಕಾರಿ ಭದ್ರತಾ ಚೀಟಿ ವೆಚ್ಚವನ್ನು ಮದ್ಯ ತಯಾರಕರ ಬದಲಿಗೆ ಗ್ರಾಹಕರಿಗೆ ವರ್ಗಾಯಿಸಲಾಗಿತ್ತು. ಇದರಿಂದಾಗಿ ಗ್ರಾಹಕರು ಪ್ರತಿ ಬಾಟಲಿ ಮದ್ಯಕ್ಕೆ 31.74 ಪೈಸೆಯಷ್ಟು ಹೆಚ್ಚುವರಿ ದರ ಪಾವತಿಸಬೇಕಿತ್ತು. ಈ ಹಿಂದೆ EAL ವೆಚ್ಚವೂ ಸೇರಿ ಮದ್ಯದ ಬಾಟಲಿಯ ಗರಿಷ್ಠ ಮಾರಾಟ ದರ ನಿಗದಿಯಾಗುತ್ತಿತ್ತು. ಅದರಲ್ಲಿ ಮದ್ಯ ತಯಾರಕರೇ EAL ವೆಚ್ಚ ಭರಿಸಬೇಕಿತ್ತು. ಇದನ್ನು ಬದಲಿಸಿ ಸರ್ಕಾರ ಗ್ರಾಹಕರಿಗೆ ವರ್ಗಾಯಿಸಿತ್ತು. ಅಲ್ಲದೆ ಖಾಸಗಿ ಮಣಿಪಾಲ್ ಟೆಕ್ನಾಲಜೀಸ್ ಲಿಮಿಟೆಡ್​ಗೆ ಟೆಂಡರ್ ನೀಡಿತ್ತು.ಮಾಧ್ಯಮಗಳ ವರದಿಯಿಂದ ಎಚ್ಚೆತ್ತ ಅಬಕಾರಿ ಇಲಾಖೆ ಆದೇಶವನ್ನ ವಾಪಸ್ ಪಡೆದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪತಿ-ಪತ್ನಿ ಪರಸ್ಪರ ದೂರು ದಾಖಲು