Select Your Language

Notifications

webdunia
webdunia
webdunia
webdunia

ಹಿಟ್​ &​ ರನ್​​ಗೆ ಪಾದಚಾರಿ ಬಲಿ

ಹಿಟ್​ &​ ರನ್​​ಗೆ ಪಾದಚಾರಿ ಬಲಿ
bangalore , ಸೋಮವಾರ, 26 ಜೂನ್ 2023 (18:49 IST)
ರಾಜಧಾನಿ ಬೆಂಗಳೂರಿನಲ್ಲಿ ಹಿಟ್ ಆ್ಯಂಡ್ ರನ್​ಗೆ ಪಾದಚಾರಿಯೊಬ್ಬರು ಬಲಿಯಾದ ದಾರುಣ ಘಟನೆ ನವರಂಗ್ ಸಿಗ್ನಲ್​ ಬಳಿ ನಿನ್ನೆ ನಡೆದಿದೆ. ಮೃತ ಪಾದಚಾರಿಯನ್ನು ಕೃಷ್ಣಪ್ಪ ಎಂದು ಗುರುತಿಸಲಾಗಿದೆ. ಯು ಟರ್ನ್​ ತೆಗೆದುಕೊಳ್ಳುವಾಗ ಕಾರೊಂದು ಕೃಷ್ಣಪ್ಪ ಅವರಿಗೆ ಡಿಕ್ಕಿ ಹೊಡೆದಿದ್ದು, ಚಾಲಕ ಕಾರು ನಿಲ್ಲಿಸದೇ ಪರಾರಿಯಾಗಿದ್ದಾನೆ. ಡಿಕ್ಕಿ ರಭಸಕ್ಕೆ ರಸ್ತೆಗೆ ಬಿದ್ದ ಕೃಷ್ಣಪ್ಪ ತಲೆಗೆ ಬಲವಾದ ಪೆಟ್ಟುಬಿದ್ದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ರಾಜಾಜಿನಗರ ಸಂಚಾರಿ ಪೊಲೀಸರು, ಪರಾರಿಯಾಗಿದ್ದ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಡಿಕೆಶಿ ನೇತೃತ್ವದಲ್ಲಿ ಕೆಡಿಪಿ ಮೀಟಿಂಗ್