Select Your Language

Notifications

webdunia
webdunia
webdunia
webdunia

ಇಂದು ಡಿಕೆಶಿ ನೇತೃತ್ವದಲ್ಲಿ ಕೆಡಿಪಿ ಮೀಟಿಂಗ್

ಇಂದು ಡಿಕೆಶಿ ನೇತೃತ್ವದಲ್ಲಿ ಕೆಡಿಪಿ ಮೀಟಿಂಗ್
ರಾಮನಗರ , ಸೋಮವಾರ, 26 ಜೂನ್ 2023 (18:30 IST)
ಕೆಡಿಪಿ ಮೀಟಿಂಗ್​ನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಭಾಗಿಯಾಗಲಿದ್ದಾರೆ. ಡಿಸಿಎಂ ಆದ ಬಳಿಕ ಇದೇ ಮೊದಲ ಬಾರಿಗೆ ರಾಮನಗರ ಜಿಲ್ಲೆಯ ಅಧಿಕಾರಿಗಳ ಜೊತೆ ಡಿಕೆಶಿ ಸಭೆ ನಡೆಸಲಿದ್ದಾರೆ. ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಜೊತೆ ಡಿಕೆಶಿ ಕೆಡಿಪಿ ಸಭೆ ನಡೆಸಲಿದ್ದಾರೆ.ಈಗಾಗಲೇ ಬೆಂಗಳೂರಿನಿಂದ ಹೊರಡಿರುವ ಡಿಸಿಎಂ ಡಿಕೆಶಿ,  ರಾಮನಗರ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆಯಲಿರುವ ಕೆಡಿಪಿ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಜಿಲ್ಲೆಯ ಸಮಗ್ರ ಅಭಿವೃದ್ಧಿ ಕುರಿತು ಡಿಸಿಎಂ ಅಧಿಕಾರಿಗಳ ಜೊತೆ ಚರ್ಚಿಸಲಿದ್ದಾರೆ. ಸಭೆಯಲ್ಲಿ ಸಂಸದ ಡಿ.ಕೆ.ಸುರೇಶ್, ಶಾಸಕರಾದ ಹೆಚ್.ಸಿ.ಬಾಲಕೃಷ್ಣ, ಶಾಸಕ ಇಕ್ಬಾಲ್ ಹುಸೇನ್ ಭಾಗಿಯಾಗಲಿದ್ದಾರೆ. ಸಂಜೆ 4:30ಕ್ಕೆ ರಾಮನಗರದಿಂದ ಬೆಂಗಳೂರಿಗೆ ಡಿಕೆಶಿ ವಾಪಸ್ ಆಗಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಕಲಿ ರೈತರ ಖಾತೆ ಸೇರಿದ ಹಣ