Select Your Language

Notifications

webdunia
webdunia
webdunia
webdunia

ಪತಿ-ಪತ್ನಿ ಪರಸ್ಪರ ದೂರು ದಾಖಲು

ಪತಿ-ಪತ್ನಿ ಪರಸ್ಪರ ದೂರು ದಾಖಲು
bangalore , ಸೋಮವಾರ, 26 ಜೂನ್ 2023 (19:57 IST)
4 ಗೋಡೆಯ ಒಳಗೆ ಮುಗಿಯಬೇಕಿದ್ದ ನಟ, ನಿರ್ಮಾಪಕನ ಕೌಟುಂಬಿಕ ಸಮಸ್ಯೆಯೊಂದು ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಪತ್ನಿ ಡ್ರಗ್ಸ್​ಗಾಗಿ ಡ್ರಗ್ ಪೆಡ್ಲರ್ ಜೊತೆ ಅನೈತಿಕ ಸಂಬಂಧವಿದೆ ಎಂದು ನಟ ನಿರ್ಮಾಪಕ, ಟಿ.ಚಂದ್ರಶೇಖರ್ ದೂರು ನೀಡಿದ್ದಾರೆ..ಪತಿ ಮನೆಗೆ ಬಂದಾಗ ಪತ್ನಿ ಹಾಗೂ ಡ್ರಗ್ ಪೆಡ್ಲರ್ ದೈಹಿಕ ಸಂಪರ್ಕದಲ್ಲಿದ್ದನ್ನ ನೋಡಿ ಪ್ರಶ್ನಿಸಿದಾಗ ಇಬ್ಬರೂ ಸೇರಿ ಹಲ್ಲೆ ಮಾಡಿದ್ದಾರೆ.. ಪತ್ನಿ ಹಾಗೂ ಆಕೆಯ ಪ್ರಿಯತಮ ಎಂದು ಲಕ್ಷ್ಮೀಶ್ ಪ್ರಭು ಎಂಬಾತನ ಮೇಲೆ ದೂರು ನೀಡಿದ್ದಾರೆ. ಹೀಗೊಂದು ದಿನ ಹಾಗೂ ಅಪ್ಪುಗೆ ಎಂಬ ಚಿತ್ರಗಳಿಗೆ ಚಂದ್ರಶೇಖರ್ ನಿರ್ಮಾಣ ಮಾಡಿದ್ದಾರೆ. ಇತ್ತ ಪತಿಯ ಮೇಲೆ ಪತ್ನಿ ಮರು ದೂರು ನೀಡಿದ್ದು ಪ್ರಕರಣ ಸಾಕಷ್ಟು ಗೊಂದಲಗಳನ್ನ ಸೃಷ್ಠಿಸಿದೆ. ಮನೆಯಲ್ಲಿ ಡ್ರಗ್ ಇಟ್ಟು ಅರೆಸ್ಟ್ ಮಾಡಿಸ್ತೀನಿ ಎಂದು ಚಂದ್ರಶೇಖರ್ ಬೆದರಿಕೆ ಹಾಕಿದ್ದಾನೆ. ಅಷ್ಟಲ್ಲದೆ ದೂರುದಾರೆಯ ಸ್ನೇಹಿತ ಲಕ್ಷ್ಮೀಶ್ ಪ್ರಭುಗೆ ಥಳಿಸಿದ್ದಲ್ಲದೆ ಚಾಕುವಿನಿಂದ ನನ್ನ ಮೇಲೆ ಕೂಡ ಹಲ್ಲೆ ನಡೆಸಿರೋದಾಗಿ ಆತನು ದೂರು ನೀಡಿದ್ದಾನೆ.ಸದ್ಯ ಈ ಸಂಬಂಧ ಪರಸ್ಪರ ಪತಿ-ಪತ್ನಿ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಿಡಿಗೇಡಿಗಳ ನೀಚ ಕೃತ್ಯ