Select Your Language

Notifications

webdunia
webdunia
webdunia
webdunia

ಚಿತ್ರನಟ ಮಾಸ್ಟರ್ ಆನಂದ್​ಗೆ ವಂಚನೆ

ಚಿತ್ರನಟ ಮಾಸ್ಟರ್ ಆನಂದ್​ಗೆ ವಂಚನೆ
bangalore , ಸೋಮವಾರ, 26 ಜೂನ್ 2023 (19:34 IST)
ಚಿತ್ರನಟ, ನಿರ್ದೇಶಕ ಮಾಸ್ಟರ್ ಆನಂದ್ ಅವರಿಗೆ ನಿವೇಶನ ನೀಡುವುದಾಗಿ 18.50 ಲಕ್ಷ ಮುಂಗಡ ಹಣ ಪಡೆದು ವಂಚಿಸಲಾಗಿದ್ದು, ಚಂದ್ರ ಲೇಔಟ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. 2020ರ ಸೆಪ್ಟಂಬರ್‌ನಿಂದ 2021 ರ ಅಕ್ಟೋಬರ್‌ನ ಅವಧಿಯಲ್ಲಾದ ವಂಚನೆಗೆ ಸಂಬಂಧಿಸಿದಂತೆ ಮಲ್ಟಿ ಲೀಪ್ ವೆಂಚರ್ಸ್ ಕಂಪನಿ ವಿರುದ್ಧ ಮಾಸ್ಟರ್ ಆನಂದ್ ಚಂದ್ರ ಲೇಔಟ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಕೊಮ್ಮಘಟ್ಟದ ರಾಮಸಂದ್ರ ಗ್ರಾಮದಲ್ಲಿ ಆನಂದ್ ಶೂಟಿಂಗ್‌ಗಾಗಿ ತೆರಳಿದ್ದ ವೇಳೆ ನಿವೇಶನಗಳನ್ನು ನೋಡಿದ್ದರು. ಮನಿಕಾ ಕೆಂ.ಎಂ.ನಿಂದ ನಿವೇಶನ ಖರೀದಿಸಲು ಸಾಲ ಸೌಲಭ್ಯ ಇರೋದಾಗಿ ಹೇಳಿದ್ರು . ಆ ಬಳಿಕ ರಾಮಸಂದ್ರದ 2000 ಅಡಿ ವಿಸ್ತೀರ್ಣದ ನಿವೇಶನವನ್ನು ಮಲ್ಟಿ ಲೀಪ್ ವೆಂಚರ್ಸ್ ಕಂಪನಿ ತೋರಿಸಿದ್ದರು. 70 ಲಕ್ಷಕ್ಕೆ ಖರೀದಿ ಒಪ್ಪಂದವಾಗಿ ಹಂತ ಹಂತವಾಗಿ 18.50 ಲಕ್ಷ ಮುಂಗಡ ಹಣವನ್ನು ಕಂಪನಿಗೆ ಮಾಸ್ಟರ್ ಆನಂದ್ ನೀಡಿದ್ದರು. ಕಂಪನಿಯು ಮಾಸ್ಟರ್ ಆನಂದ್ ಹಾಗು ಪತ್ನಿ ಯಶಸ್ವಿನಿ ಹೆಸರಲ್ಲಿ ಖರೀದಿ ಖರಾರು ಪತ್ರವನ್ನು ಮಾಡಿಕೊಟ್ಟಿತ್ತು. ಈ ನಡುವೆ ನಿವೇಶನವನ್ನ ಕಂಪನಿ ಬೇರೆಯವರಿಗೆ ಮಾರಾಟ ಮಾಡಿದ್ದು, ಈ ಬಗ್ಗೆ ವಿಚಾರಿಸಿದಾಗ ಕಂಪನಿ ಯಾವುದೇ ಸ್ಪಂದನೆ ಸಹ ನೀಡದೆ ಮುಂಗಡ ಹಣವನ್ನ ಸಹ ವಾಪಸ್ ನೀಡದೆ ವಂಚನೆ ಮಾಡಿದೆ. ಇನ್ನು ವಂಚನೆ ಬಗ್ಗೆ ಚಂದ್ರ ಲೇಔಟ್ ಠಾಣೆಯಲ್ಲಿ ಮಾಸ್ಟರ್ ಆನಂದ್ ದೂರು ನೀಡಿದ್ದು, FIR ದಾಖಲಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತಿಬ್ಬರು ಆರೋಪಿಗಳ ಬಂಧನ