Publish Date: Mon, 26 Jun 2023 (19:07 IST)
Updated Date: Mon, 26 Jun 2023 (17:09 IST)
ಮೈಸೂರಿನಲ್ಲಿ ನಡೆದ ಡಬಲ್ ಮರ್ಡರ್ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಮತ್ತಿಬ್ಬರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಾದ ತೌಸಿಫ್ ಹಾಗೂ ಒಬ್ಬ ಬಾಲಕನ ಬಂಧನವಾಗಿದ್ದು, 485 ರೂಪಾಯಿಗೆ ಜೋಡಿ ಕೊಲೆ ಮಾಡಿದ್ದರು. ಹೀಗಾಗಲೇ ಪ್ರಮುಖ ಆರೋಪಿ ಅಭಿಷೇಕ್ ಅಲಿಯಾಸ್ ಅಭಿಯನ್ನ ಹುಣಸೂರು ಪೊಲೀಸರು ಬಂಧಿಸಿದ್ದರು. ವೆಂಕಟೇಶ್, ಷಣ್ಮುಖ ಎಂಬುವರನ್ನು ರಾಡಿನಿಂದ ತಲೆಗೆ ಹೊಡೆದು ಹತ್ಯೆ ಮಾಡಿರುವ ದೃಶ್ಯ ಸಾಮಿಲ್ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಕೊಲೆ ಮಾಡಿ ವೆಂಕಟೇಶ್ ಬಳಿ ಇದ್ದ 485 ರೂಪಾಯಿಯನ್ನ ಆರೋಪಿಗಳು ತೆಗೆದುಕೊಂಡು ಹೋಗಿದ್ದರು. ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈಗ ಬಂಧಿತ ಆರೋಪಿ ಅಭಿ ನೀಡಿದ ಹೇಳಿಕೆ ಆಧರಿಸಿ ಮತ್ತಿಬ್ಬರು ಆರೋಪಿಗಳನ್ನ ಪೊಲೀಸರು ಸೆರೆ ಹಿಡಿದಿದ್ದಾರೆ.
geetha
Publish Date: Mon, 26 Jun 2023 (19:07 IST)
Updated Date: Mon, 26 Jun 2023 (17:09 IST)