Select Your Language

Notifications

webdunia
webdunia
webdunia
webdunia

ಕಿಡಿಗೇಡಿಗಳ ನೀಚ ಕೃತ್ಯ

ಕಿಡಿಗೇಡಿಗಳ ನೀಚ ಕೃತ್ಯ
ಕೊಪ್ಪಳ , ಸೋಮವಾರ, 26 ಜೂನ್ 2023 (19:47 IST)
ಸಿನಿಮಾ ಸ್ಟೈಲ್‌ನಲ್ಲಿ ಬಾಲಕಿಯರ ಹೆಸರು ಹಾಗೂ ಅಶ್ಲೀಲ ಪದಗಳನ್ನು ಊರು ತುಂಬೆಲ್ಲಾ ಕಿಡಿಗೇಡಿಗಳು ಬರೆದಿರುವ ಘಟನೆ ಕೊಪ್ಪಳದ ಕನಕಗಿರಿ ಪಟ್ಟಣದಲ್ಲಿ ನಡೆದಿದೆ. ಕಿಡಿಗೇಡಿಗಳ ಕೃತ್ಯಕ್ಕೆ ಹೈಸ್ಕೂಲ್​ಗೆ ತೆರಳಲು ಬಾಲಕಿಯರು ಹೆದರುತ್ತಿದ್ದಾರೆ. ಬಾಲಕಿಯರ ಹೆಸರುಗಲನ್ನ ಕಂಡು ಊರು ತುಂಬೆಲ್ಲಾ ಬರೆದಿರುವ ಗೋಡೆಬರಹಗಳಿಗೆ ಪೋಷಕರು ಪೇಂಟಿಂಗ್ ಹಚ್ಚಿದ್ದಾರೆ. ಕನಕಗಿರಿ ಪಟ್ಟಣದ ಸರ್ಕಾರಿ ಶಾಲೆಯ ಹೈಸ್ಕೂಲ್ ವಿದ್ಯಾರ್ಥಿನಿಯರ ಹೆಸರನ್ನ ಕಿಡಿಗೇಡಿಗಳು ಬರೆದಿದ್ದಾರೆ. ಗೋಡೆ ಬರಹ ಕಂಡು ವಿದ್ಯಾರ್ಥಿನಿಯರ ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಗೋಡೆ ಮೇಲೆ ಬರೆದಿದ್ದಲ್ಲದೇ ವಿದ್ಯಾರ್ಥಿನಿಯರ ಮನೆಗೂ ಕಿಡಿಗೇಡಿಗಳು ಅಶ್ಲೀಲ ಲೆಟರ್ ಕಳುಹಿಸಿದ್ದಾರೆ. ಕಿಡಿಗೇಡಿಗಳ ವಿರುದ್ದ ಸ್ಥಳೀಯರು FIR ದಾಖಲಿಸಿದ್ದು, ಕನಕಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಮುಕ ಕಿಡಿಗೇಡಿಗಳನ್ನು ಬಂಧಿಸುವಂತೆ ಪೋಷಕರು ಆಗ್ರಹಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಿತ್ರನಟ ಮಾಸ್ಟರ್ ಆನಂದ್​ಗೆ ವಂಚನೆ