Select Your Language

Notifications

webdunia
webdunia
webdunia
webdunia

ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಅಭಿವೃದ್ಧಿಯಿಲ್ಲ ಎಂದ ಮಾಜಿ ಸಚಿವ

ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಅಭಿವೃದ್ಧಿಯಿಲ್ಲ ಎಂದ ಮಾಜಿ ಸಚಿವ
ಬೆಳಗಾವಿ , ಗುರುವಾರ, 25 ಅಕ್ಟೋಬರ್ 2018 (15:48 IST)
ರಾಜ್ಯದಲ್ಲಿ ಕಳೆದ ಆರು ತಿಂಗಳಿಂದ ಸರ್ಕಾರದ ಅಸ್ಥಿತ್ವದ ಬಗ್ಗೆ ಸಂಶಯ ಇದೆ. ರಸ್ತೆಗಳು ಸರಿಯಾಗಿಲ್ಲ, ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ಅಭಿವೃದ್ಧಿಯತ್ತ ಗಮನ ಇಲ್ಲ. ಹಿಂದಿನ ಸರ್ಕಾರ ಐವತ್ತು ಸಾವಿರ ಸಾಲ ಮನ್ನಾ ಮಾಡಿದ್ದು ಮೂರು ಸಾವಿರ ಕೋಟಿ ಹಣಬರಬೇಕಿದೆ ಅದು ಇನ್ನೂ ಬಂದಿಲ್ಲ ಎಂದು ಮಾಜಿ ಸಚಿವ ಆರೋಪ ಮಾಡಿದ್ದಾರೆ.

ಮಾಜಿ ಶಾಸಕ ಲಕ್ಷ್ಮಣ ಸವದಿ ಬೆಳಗಾವಿ ಜಿಲ್ಲೆಯ ಅಥಣಿ ಕೃಷ್ಣಾ ಸಕ್ಕರೆ ಕಾರ್ಖಾನೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.   
ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಸ್ವಾಮಿ ಸಾಲಮನ್ನಾ ಮಾಡುತ್ತೇನೆ ಎಂದಿದ್ದಾರೆ. ಆದರೆ ನಲವತ್ತೊಂಬತ್ತು ಸಾವಿರ ಕೋಟಿ ಸಾಲಮನ್ನಾ ಭರವಸೆ ಇಂದಿಗೂ ಈಡೇರಿಸಿಲ್ಲ. ಸಾಲಮನ್ನಾ ಯೋಜನೆ ರೈತರ ಪಾಲಿಗೆ ಬಿಸಿಲು ಕುದುರೆ ಆಗಿದೆ ಎಂದು ದೂರಿದ್ದಾರೆ.

ಸರ್ಕಾರದ ಕೆಲಸಗಳನ್ನು ಜನರಿಗೆ ತಲುಪಿಸುವ ಕೆಲಸವಾಗುತ್ತಿಲ್ಲ. ಸರ್ಕಾರಿ ಇಲಾಖೆಗಳಲ್ಲಿ  ಸಂಬಳವಾಗಿಲ್ಲ. ಗುತ್ತಿಗೆದಾರರ ಹಣ ಬಾಕಿ ಇದೆ. ಕಾಮಗಾರಿಗಳು  ನಿಂತು ಹೋಗಿವೆ. ವಿಶೇಷವಾಗಿ ಅಥಣಿ ತಾಲೂಕಿನ ಸಿ ಅರ್ ಎಪ್, ಲೊಕೊಪಯೋಗಿ ಇಲಾಖೆ ಸೇರಿದಂತಹ ಹಲವು ಇಲಾಖೆಗಳಲ್ಲಿ ಗುತ್ತಿಗೆದಾರರ ಬಾಕಿ ಉಳಿದಿದೆ. ಜತ್ತ ಜಾಂಬೋಟಿ ರಸ್ತೆ ಕಾಮಗಾರಿ ನಿಂತುಹೋಗಿ ಜನಸಾಮಾನ್ಯರ ಗೋಳು ಹೆಚ್ಚಿದೆ ಎಂದು ಟೀಕಿಸಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಉಪಸಮರ ಬಿಜೆಪಿ-ಕಾಂಗ್ರೆಸ್ ನಡುವೆ ಎಂದ ಡಿಕೆಶಿ