Publish Date: Thu, 25 Oct 2018 (15:40 IST)
Updated Date: Thu, 25 Oct 2018 (15:42 IST)
ಲೋಕಸಭೆಯ ಉಪ ಸಮರ ಬಿಜೆಪಿ - ಕಾಂಗ್ರೆಸ್‌ಮಧ್ಯೆ ನಡೆಯುತ್ತಿದೆಯೇ ಹೊರತು ಡಿ.ಕೆ.ಶಿವಕುಮಾರ ಮತ್ತು ಬಿ.ಶ್ರೀರಾಮುಲು ನಡುವೆ ಅಲ್ಲ ಎಂದು ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬಳ್ಳಾರಿ ನಗರದ ಕೋರ್ಟ್ ಮೊಹಲ್ಲಾ, ಮಿಲಾರ್ ಪೇಟೆ, ವರಬಸಪ್ಪ ಗುಡಿ ಹತ್ತಿರ ಪ್ರದೇಶದ ಮನೆಮನೆಗಳಿಗೆ ತೆರಳಿ ಮತ ಪ್ರಚಾರ ನಡೆಸಿದರು. ಭಾರೀ ಮೆರವಣಿಗೆಯಲ್ಲಿ ಕಾಲ್ನಡಿಗೆ ಮೂಲಕ ಮತಯಾಚಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ಬಗ್ಗೆ ಹೆಚ್ವಿನ ಒಲವು ಕಂಡು ಬಂದಿದೆ. ಇಲ್ಲಿನ ಚುನಾವಣೆಯಲ್ಲಿ ಪಕ್ಷಗಳ ಮಧ್ಯೆ ನಡೆಯಲಿದೆ. ಡಿ.ಕೆ.ಶಿವಕುಮಾರ ಮತ್ತು ಬಿ.ಶ್ರೀರಾಮುಲು ನಡುವೆ ಅಲ್ಲ.
ನಾನು ಬೆಂಗಳೂರಿನವನು ಅವರು ಚಿತ್ರದುರ್ಗ ಜಿಲ್ಲೆಯವರು. ಶಾಂತ ಹಾಗೂ ಉಗ್ರಪ್ಪ ನಡುವೆ ಸ್ಪರ್ದೆ ಎಂದರು. ನಿಮ್ಮ ಗೆಲವು ಎಷ್ಟು ಮತಗಳ ಅಂತರವಿರಬಹುದು ಎನ್ನುವ ಪ್ರಶ್ನೆಗೆ ನಾನು ಜೋತಿಷ್ಯ ಅಲ್ಲ ಗೆಲ್ಲುವ ವಿಶ್ವಾಸ ವಿದೆ ಎಂದರು.