Select Your Language

Notifications

webdunia
webdunia
webdunia
webdunia

ನಿರ್ದೇಶಕ ಶಿವಮಣಿ ಮೇಲೆ ಮೀಟೂ ಆರೋಪ ಮಾಡಿದ ನಟಿ ಕೈರಾ ಕಿಮ್

ನಿರ್ದೇಶಕ ಶಿವಮಣಿ ಮೇಲೆ ಮೀಟೂ ಆರೋಪ ಮಾಡಿದ ನಟಿ ಕೈರಾ ಕಿಮ್
ಬೆಂಗಳೂರು , ಗುರುವಾರ, 25 ಅಕ್ಟೋಬರ್ 2018 (10:33 IST)
ಬೆಂಗಳೂರು : ಇತ್ತೀಚೆಗೆ ಸ್ಯಾಂಡಲ್ ವುಡ್ ನಲ್ಲಿ ಮೀಟೂ ಆರೋಪ ಜೋರಾಗಿ ಕೇಳಿಬರುತ್ತಿದ್ದು, ಇದೀಗ ನಟಿ ಕೈರಾ ಖ್ಯಾತ ನಿರ್ದೇಶಕರೊಬ್ಬರ ಮೇಲೆ ಮೀಟೂ ಆರೋಪ ಮಾಡಿದ್ದಾರೆ.


ಹೌದು. ಉದಯೋನ್ಮುಖ ನಟಿ ಕೈರಾ ಕಿಮ್​ ನಿರ್ದೇಶಕ ಶಿವಮಣಿ ಹಾಗೂ ಮಹೇಶ್​ ಎಂಬ ವ್ಯಕ್ತಿಯ ಮೇಲೆ ಗಂಭಿರ ಆರೋಪ ಮಾಡಿದ್ದಾರೆ. ಇವರು ಸಿನಿಮಾದಲ್ಲಿ ಲೀಡ್​ ರೋಲ್​ ನೀಡುವ ಹೆಸರಲ್ಲಿ ಕಮಿಟ್​ಮೆಂಟ್​ ಕೇಳಿದ್ದರು ಎಂದು ನಟಿ ಕೈರಾ ಫೇಸ್ ಬುಕ್ ನಲ್ಲಿ ಹೇಳಿಕೊಂಡಿದ್ದಾರೆ.


ಶಿವಮಣಿ ನಿರ್ದೇಶಿಸಿ, ನಿರ್ಮಿಸುವ ಸಿನಿಮಾದಲ್ಲಿ ಕೈರಾಗೆ ನಾಯಕಿ ಪಾತ್ರ ನೀಡಲು ಇಂದಿರಾನಗರದ ಹೋಟೆಲ್ ಗೆ ಬರಲು ಮಹೇಶ್ ಎನ್ನುವವರು ಹೇಳಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಆದರೆ ಈ ವಿಷಯದಲ್ಲಿ ಶಿವಮಣಿ ಕೈರಾ ಅವರನ್ನು ನೇರವಾಗಿ ಭೇಟಿಯಾಗದೆ ಮಹೇಶ್ ಎನ್ನುವವರ ಮೂಲಕ ಹೇಳಿಸಿದ್ದಾರೆ ಎಂದು ಆರೋಪಿಸಲಾಗಿದೆ.


ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ನಿರ್ದೇಶಕ ಶಿವಮಣಿ 'ಮಹೇಶ್​ ಯಾರು ಎಂದು ನನಗೆ ಗೊತ್ತಿಲ್ಲ. ಆದರೆ ನಟಿ ಕೈರಾ ಅವರ ಆರೋಪ ಸುಳ್ಳು. ಅವರ ವಿರುದ್ಧ ನಾನು ದೂರು ನೀಡಲಿದ್ದೇನೆ' ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮೀಟೂ ಎಂದ ನಟಿ ಆಲಿಯಾ ಭಟ್ ತಾಯಿ ಸೋನಿ ರಜ್ದಾನ್