Select Your Language

Notifications

webdunia
webdunia
webdunia
Monday, 14 April 2025
webdunia

ವಿಚಾರವಾದಿಗಳ ಹತ್ಯೆಯಲ್ಲಿ ಹಿಂದುಗಳ ಕೈವಾಡವಿದೆ ಎಂದು ಆರೋಪಿಸಿದವರು ಯಾರು?

ಬಸವರಾಜ್ ಸೂಳಿಬಾವಿ
ಗದಗ , ಗುರುವಾರ, 26 ಜುಲೈ 2018 (15:43 IST)
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಹಿಂದೆ ಆರ್.ಎಸ್.ಎಸ್ ಸೇರಿದಂತೆ ಅನೇಕ ಹಿಂದೂ ಸಂಘಟನೆಗಳ ಕೈವಾಡವಿದೆ ಎಂದು ಎಮ್.ಎಮ್. ಕಲಬುರ್ಗಿ, ಗೌರಿ ಲಂಕೇಶ್, ದಾಬೋಲ್ಕರ್, ಪನ್ಸಾರೆ ಹತ್ಯಾ ವಿರೋಧಿ ಹೋರಾಟ ಸಮಿತಿ ಸಂಚಾಲಕ ಬಸವರಾಜ್ ಸೂಳಿಭಾವಿ ಗಂಭೀರ ಆರೋಪ ಮಾಡಿದ್ದಾರೆ.

ಗದಗನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಸ್ಐಟಿ ವಿಚಾರಣೆಗಾಗಿ ಬಂಧಿಸಿರುವ 10 ಜನರು ಹಿಂದೂ ಸಂಘಟನೆಗಳ ಸದಸ್ಯರಿದ್ದಾರೆ. ಸಂಘಟನೆಗಳ ಹೆಸರು ಬೇರೆಯಾದ್ರೂ ಅದರ ಮಾತೃಸಂಸ್ಥೆ ಆರ್.ಎಸ್.ಎಸ್ ಒಂದೇ  ಎಂದರು. ಆರ್.ಎಸ್.ಎಸ್ ದೇಶದಲ್ಲಿ ಹಿಂಸೆ ನಡೆಸುವ ಸಂಘಟನೆಯಾಗಿದೆ.

ವಿಧ್ವಂಸಕ ಕೃತ್ಯಗಳ ನಂತರ, ಮಾಡಿದ ವ್ಯಕ್ತಿ ನಮ್ಮವನಲ್ಲ ಎಂದು ನುಣುಚಿಕೊಳ್ಳುತ್ತೆ. ನಂತರ ಬೇರೆ ಬೇರೆ ಧರ್ಮಗಳ ಪ್ರತಿನಿಧಿಗಳನ್ನು ಹತ್ಯೆ ಮಾಡಲು ಮುಂದಾಗುವುದು ಯಾವ ನ್ಯಾಯ? ಎಂದು ಪ್ರಶ್ನಿಸಿದರು.  ಗೋ ರಕ್ಷಣೆ ಹೆಸರಲ್ಲಿ ಸಾಮೂಹಿಕ ಹಿಂಸೆ ನಡೆಸ್ತಿದ್ದಾರೆ. ಇದು ನಿಲ್ಲಬೇಕು ಎಂದು ಬಂಡಾಯ ಸಾಹಿತಿ ಬಸವರಾಜ್ ಸೂಳಿಬಾವಿ ಹಿಂದೂ ಸಂಘಟನೆಗಳ ವಿರುದ್ಧ ಕಿಡಿಕಾರಿದರು.




Share this Story:

Follow Webdunia kannada

ಮುಂದಿನ ಸುದ್ದಿ

ಕುಡಿದು ವ್ಯಾನ್ ಚಲಾಯಿಸಿದ ಪೊಲೀಸಪ್ಪ ಮಾಡಿದ ಅಪಘಾತಗಳೆಷ್ಟು ಗೊತ್ತಾ?