Publish Date: Wed, 25 Jul 2018 (09:50 IST)
Updated Date: Wed, 25 Jul 2018 (09:52 IST)
ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೂ ಮೊದಲು ನಾಡಿನ ಮತ್ತೊಬ್ಬ ವಿಚಾರವಾದಿ ಸಾಹಿತಿ ಗಿರೀಶ್ ಕಾರ್ನಾಡ್ ಹತ್ಯೆಗೆ ಹಂತಕರು ಸಂಚು ರೂಪಿಸಿದ್ದರಂತೆ!
ವಿಚಾರವಾದಿಗಳ ಹತ್ಯೆಗೆ ಪಟ್ಟಿಯನ್ನೇ ಮಾಡಿಕೊಂಡಿದ್ದ ಹಂತಕರು ಗಿರೀಶ್ ಕಾರ್ನಾಡ್ ರನ್ನು ಮೊದಲು ಹತ್ಯೆ ಮಾಡಲು ಸಂಚು ರೂಪಿಸಿದ್ದರಂತೆ. ಆದರೆ ಅದು ಸಾಧ್ಯವಾಗಲಿಲ್ಲ. ಹೀಗಾಗಿ ಎರಡನೇ ಸ್ಥಾನದಲ್ಲಿದ್ದ ಗೌರಿ ಹಂತಕರ ಗುಂಡಿಗೆ ಬಲಿಯಾದರು ಎಂದು ಎಸ್ ಐಟಿ ತನಿಖೆ ವೇಳೆ ಬಹಿರಂಗವಾಗಿದೆ.
ಹಿಂದೂ ಜಾಗರಣ ವೇದಿಕೆ ನಾಯಕ ಅಮೋಲ್ ಕಾಳೆ ಬಳಿಯಿದ್ದ ಡೈರಿಯಿಂದ ಈ ವಿಚಾರ ಬಹಿರಂಗವಾಗಿದೆಯಂತೆ. ಗೌರಿ ಲಂಕೇಶ್ ಅಲ್ಲದೆ 33 ಮಂದಿಯ ಹತ್ಯೆಗೆ ಹಂತಕರು ಪಟ್ಟಿ ಸಿದ್ಧಮಾಡಿಕೊಂಡಿದ್ದರು ಎಂದು ವಿಚಾರಣೆಯಿಂದ ತಿಳಿದುಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.