ಲೈಂಗಿಕ ಸುಖ ನೀಡದ್ದಕ್ಕೆ ಪತ್ನಿಯನ್ನು ಕೊಲೆಗೈದ ಪಾಪಿ ಪತಿ

ಮಂಗಳವಾರ, 17 ಜುಲೈ 2018 (08:53 IST)
ನವದೆಹಲಿ: ಪತ್ನಿ ಲೈಂಗಿಕ ಸುಖ ನೀಡಲು ನಿರಾಕರಿಸಿದಳು ಎಂಬ ಕಾರಣಕ್ಕೆ ಕ್ಯಾನ್ಸರ್ ರೋಗ ಪೀಡಿತ ಪತಿ ಮಹಾಶಯನೊಬ್ಬ ಆಕೆಯನ್ನು ಕೊಲೆಗೈದ ಘಟನೆ ನೋಯ್ಡಾದಲ್ಲಿ ನಡೆದಿದೆ.

40 ವರ್ಷದ ಅಜಯ್ ಅಲಿಯಾಸ್ ಮಹೇಶ್ ಎಂಬಾತ ಬಾಯಿ ಕ್ಯಾನ್ಸರ್ ನಿಂದ ಬಳಲುತ್ತಿದ್ದ. ಕ್ಯಾನ್ಸರ್ ತೀವ್ರತರವಾಗಿದ್ದರಿಂದ ಪತ್ನಿ ಲೈಂಗಿಕ ಸಂಬಂಧ ಬೇಡವೆಂದು ನಿರಾಕರಿಸಿದ್ದಳು.

ಆದರೆ ಸಿಟ್ಟಿಗೆದ್ದ ಪತಿ ಅಜಯ್  36 ವರ್ಷದ ಪತ್ನಿ ಮಮತಾ ದೇವಿಯನ್ನು ಕತ್ತು ಸೀಳಿ ಕೊಲೆಗೈದಿದ್ದಾನೆ. ಇದೀಗ ಆರೋಪಿ ಅಜಯ್ ನನ್ನು ಪೊಲೀಸರು ಬಂಧಿಸಿದ್ದಾರೆ. ಈ ದಂಪತಿಗೆ ಒಬ್ಬ ಪುತ್ರ ಮತ್ತು ಪುತ್ರಿಯೂ ಇದ್ದಾರೆ ಎಂದು ತಿಳಿದುಬಂದಿದೆ. ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕಣ್ಣೀರು ಹಾಕಿದ ಬೆನ್ನಲ್ಲೇ ದೆಹಲಿಗೆ ದೌಡಾಯಿಸಿದ ಕುಮಾರಸ್ವಾಮಿ, ದೇವೇಗೌಡ