Select Your Language

Notifications

webdunia
webdunia
webdunia
webdunia

ಗೌರಿ ಲಂಕೇಶ್ ಹತ್ಯೆಯಲ್ಲಿ ನನ್ನ ಮಗನ ಪಾತ್ರವಿಲ್ಲ ಎಂದ ಜಯಶ್ರೀ

ಗೌರಿ ಲಂಕೇಶ್ ಹತ್ಯೆಯಲ್ಲಿ ನನ್ನ ಮಗನ ಪಾತ್ರವಿಲ್ಲ ಎಂದ ಜಯಶ್ರೀ
ಹುಬ್ಬಳ್ಳಿ , ಮಂಗಳವಾರ, 24 ಜುಲೈ 2018 (15:58 IST)
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಲ್ಲಿ ನನ್ನ ಮಗನ ಪಾತ್ರವಿಲ್ಲ. ನನ್ನ ಮಗ ಅಮಾಯಕ ಎಂದು  ಪತ್ರಕರ್ತೆ ಗೌರಿಲಂಕೇಶ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಅಮಿತ್ ಬದ್ದಿಯ ತಾಯಿ ಕಣ್ಣೀರು ಹಾಕಿದ್ದಾರೆ.

ಗೌರಿ ಲಂಕೇಶ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯ ನಿವಾಸಿಗಳಾದ ಅಮೀತ್ ರಾಮಚಂದ್ರ ಬದ್ದಿ ಹಾಗೂ ಗಣೇಶ ಮಿಸ್ಕಿನ್ ಎಂಬುವವರನ್ನು ಎಸ್ ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಅಮೀತ್ ಕುಟುಂಬಸ್ಥರು ತಮ್ಮ ಮಗನ ಬಂಧಿಸಿದಕ್ಕೆ ಕಣ್ಣೀರು ಹಾಕಿದರು. ಅಮಿತ್ ನ ತಾಯಿ ಜಯಶ್ರೀ ಬದ್ದಿ ಕಣ್ಣೀರು ಹಾಕಿದ್ದಾರೆ. ಎಸ್ ಐಟಿ ಅಧಿಕಾರಿಗಳು ಯಾವ ಕಾರಣಕ್ಕೆ ಬಂಧಿಸಿದ್ದಾರೋ ನಮಗೆ ಗೊತ್ತಿಲ್ಲನಮ್ಮ ಮನೆಯ ಜವಾಬ್ದಾರಿಯನ್ನ ಅಮಿತ್ ಹೊತ್ತಿದ್ದ. ನಮ್ಮ ಮಗ ಅಂತಾ ತಪ್ಪು ಮಾಡುವಂತವನಲ್ಲ.

ಶನಿವಾರ ಮನೆಯಿಂದ ಹೊರಗಡೆ ಹೋದವನು ಮರಳಿ ಮನೆಗೆ ಬಂದಿಲ್ಲನಮಗೆ ಇದೆಲ್ಲ ಗೊತ್ತಾಗಿದ್ದು ಶನಿವಾರ ರಾತ್ರಿನಮ್ಮ ಮಗನನ್ನು ಪೊಲೀಸರು ಸುಮ್ಮನೆ ಬಂಧನ ಮಾಡಿದ್ದಾರೆ. ಹತ್ಯೆ ಮಾಡುವಂತ ಕೆಲಸ ನಮ್ಮ ಮಗ ಮಾಡುವುದಿಲ್ಲ ಎಂದು ಕುಟುಂಬಸ್ಥರು‌‌ ಕಣ್ಣೀರು ಸುರಿಸಿದ್ದಾರೆ. 



Share this Story:

Follow Webdunia kannada

ಮುಂದಿನ ಸುದ್ದಿ

ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ: ಅನೇಕ ಸಮರ್ಥರಿದ್ದಾರೆ ಎಂದ ಸಚಿವ