Select Your Language

Notifications

webdunia
webdunia
webdunia
webdunia

ಬೆಳ್ಳಂಬೆಳಗ್ಗೆ ವಾಲ್ ಮಾರ್ಕ್ಸ್ ಕಂಪನಿ ಮಾಲೀಕರ ಮನೆ, ಕಚೇರಿ ಮೇಲೆ ಎಸಿಬಿ ದಾಳಿ

ಬೆಳ್ಳಂಬೆಳಗ್ಗೆ ವಾಲ್ ಮಾರ್ಕ್ಸ್ ಕಂಪನಿ ಮಾಲೀಕರ ಮನೆ, ಕಚೇರಿ ಮೇಲೆ ಎಸಿಬಿ ದಾಳಿ
ಬೆಂಗಳೂರು , ಶನಿವಾರ, 4 ಮೇ 2019 (10:58 IST)
ಬೆಂಗಳೂರು : ಇಂದು ಬೆಳ್ಳಂಬೆಳಗ್ಗೆ ವಾಲ್ ಮಾರ್ಕ್ಸ್ ಕಂಪನಿ ಮಾಲೀಕ, ಟಿಡಿಆರ್ ಹಗರಣದ  ಆರೋಪಿ ರತನ್ ಲಾಲ್ ಮನೆ ಮತ್ತು ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.




ಭ್ರಷ್ಟಾಚಾರ ನಿಗ್ರಹ ದಳದ(ಎಸಿಬಿ) ಅಧಿಕಾರಿಗಳು ಬೆಂಗಳೂರಿನ ಇಂದಿರಾನಗರ, ಕೆಆರ್ ನಗರ, ಹೆಚ್.ಎ.ಎಲ್. ನಲ್ಲಿ ಬೆಳ್ಳಂಬೆಳಿಗ್ಗೆ ಕಾರ್ಯಾಚರಣೆ ನಡೆಸಿದ್ದು, ಇಂದಿರಾನಗರದರತನ್ ಲಾಲ್ ಅವರ ಗೋಲ್ಡನ್ ಎನ್ ಕ್ಲೈವ್ ಫ್ಲಾಟ್ ನ ಮನೆ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ಶೋಧ ನಡೆಸಿದ್ದಾರೆ ಅಲ್ಲದೇ ಹೆಚ್ ಎಎಲ್ ಬಳಿಯ ಅವರ ಕಚೇರಿಯನ್ನೂ ಪರಿಶೀಲನೆ ನಡೆಸಿದ್ದಾರೆ.


ಅದೇರೀತಿ ವಾಲ್ ಮಾರ್ಕ್ಸ್ ಕಂಪನಿ ಏಜೆಂಟ್ ಗಳಾದ ಕೆ.ಆರ್. ಪುರಂನ ಮುನಿರಾಜು ಮತ್ತು ಏಜೆಂಟ್ ಗೌತಮ್ ಮನೆ ಮೇಲೆ ದಾಳಿ ನಡೆಸಲಾಗಿದೆ. ಹಾಗೇ ಇಂದಿರಾನಗರದ ಅಮಿತ್ ಬೋಳಾರ ಮನೆ ಮೇಲೆ ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಂಗ್ಲಾದೇಶಕ್ಕೆ ಹೊರಟ ‘ಫೋನಿ’: ಪ್ರಧಾನಿ ಮೋದಿಯಿಂದ ಇಂದು ಸಮೀಕ್ಷೆ