Select Your Language

Notifications

webdunia
webdunia
webdunia
webdunia

ಬಾಂಗ್ಲಾದೇಶಕ್ಕೆ ಹೊರಟ ‘ಫೋನಿ’: ಪ್ರಧಾನಿ ಮೋದಿಯಿಂದ ಇಂದು ಸಮೀಕ್ಷೆ

ಬಾಂಗ್ಲಾದೇಶಕ್ಕೆ ಹೊರಟ ‘ಫೋನಿ’: ಪ್ರಧಾನಿ ಮೋದಿಯಿಂದ ಇಂದು ಸಮೀಕ್ಷೆ
ಕೋಲ್ಕೊತ್ತಾ , ಶನಿವಾರ, 4 ಮೇ 2019 (10:27 IST)
ಕೋಲ್ಕೊತ್ತಾ: ಒಡಿಶಾ, ಪ.ಬಂಗಾಲಕ್ಕೆ ಅಪ್ಪಳಿಸಿ ಕೋಲಾಹಲವೆಬ್ಬಿಸಿದ ‘ಪೂನಿ’ ಚಂಡಮಾರುತ ಇದೀಗ ಬಾಂಗ್ಲಾದೇಶದತ್ತ ಸಾಗಿದೆ. ಇಂದು ಪ್ರಧಾನಿ ಮೋದಿ ಒಡಿಶಾ, ಬಂಗಾಲದಲ್ಲಿ ಚಂಡಮಾರುತಕ್ಕೆ ಸಿಲುಕಿದ ಪ್ರದೇಶಗಳನ್ನು ಸಮೀಕ್ಷೆ ನಡೆಸುವ ಸಾಧ್ಯತೆಯಿದೆ.


ಈಗಾಗಲೇ ಕೆಲವರು ಪ್ರಾಣ ಕಳೆದುಕೊಂಡಿದ್ದು, ಹಲವರು ಮನೆ, ಮಠ ಕಳೆದುಕೊಂಡು ನಿರಾಶ್ರಿತರ ಶಿಬಿರ ಸೇರಿದ್ದಾರೆ. ಚಂಡಮಾರುತದಿಂದಾಗಿ ಒಡಿಶಾ, ಪ. ಬಂಗಾಲದಲ್ಲಿ ಭಾರೀ ಮಳೆಯಾಗಿದ್ದು, ಗಿಡಡ, ಮರಗಳು ನೆಲಕ್ಕುರುಳಿ ಅನಾಹುತ ಸೃಷ್ಟಿಸಿವೆ. ಇದೀಗ ಚಂಡಮಾರುತದ ತೀವ್ರತೆ ಭಾರತದಲ್ಲಿ ಕಡಿಮೆಯಾಗಿದೆ.

ಪ್ರಧಾನಿ ಮೋದಿ ಕೇಂದ್ರದಿಂದ ಎಲ್ಲಾ ನೆರವು ನೀಡುವುದಾಗಿ ಈಗಾಗಲೇ ಭರವಸೆ ನೀಡಿದ್ದಾರೆ. ಎನ್ ಡಿಆರ್ ಎಫ್ ಸಿಬ್ಬಂದಿ ಜನರ ಪುನರ್ವಸತಿಗಾಗಿ ಸತತ ಪ್ರಯತ್ನ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಎಎಪಿ ಗೆ ಬಿಗ್ ಶಾಕ್; ಮತ್ತೊಬ್ಬ ಶಾಸಕ ಬಿಜೆಪಿಗೆ ಸೇರ್ಪಡೆ