Publish Date: Wed, 19 Jan 2022 (10:21 IST)
Updated Date: Wed, 19 Jan 2022 (10:33 IST)
ತುಮಕೂರು: ಸರಿಯಾಗಿ ಓದಲಿಲ್ಲವೆಂಬ ಸಿಟ್ಟಿನಲ್ಲಿ ಶಿಕ್ಷಕಿ ಹೊಡೆದ ಪರಿಣಾಮ ವಿದ್ಯಾರ್ಥಿನಿ ಕಣ್ಣಿಗೆ ಗಾಯವಾಗಿತ್ತು. ಈ ಘಟನೆ ಸಂಬಂಧ ಈಗ ತುಮಕೂರಿನ ಸ್ಥಳೀಯ ನ್ಯಾಯಾಲಯ ಶಿಕ್ಷಕಿಗೆ ಮೂರು ವರ್ಷ ಜೈಲು 10 ಸಾವಿರ ದಂಡ ವಿಧಿಸಿದೆ.
2011 ರಲ್ಲಿ ಘಟನೆ ನಡೆದಿತ್ತು. ವಿದ್ಯಾರ್ಥಿನಿ ಸರಿಯಾಗಿ ಓದಲಿಲ್ಲವೆಂದು ಆಕೆಯ ಕಣ್ಣಿಗೆ ಹೊಡೆದಿದ್ದರಿಂದ ಕಣ್ಣಿಗೆ ಗಂಭೀರ ಗಾಯವಾಗಿತ್ತು. ಪ್ರಕರಣ ಕುರಿತಂತೆ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು.
ಈ ಸಂಬಂಧ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಅದರಂತೆ ನ್ಯಾಯಾಲಯ ವಿದ್ಯಾರ್ಥಿನಿ ಮೇಲೆ ಹಲ್ಲೆ ಮಾಡಿದ ತಪ್ಪಿಗೆ ಶಿಕ್ಷಕಿಗೆ ಜೈಲು ಶಿಕ್ಷೆ ವಿಧಿಸಿದೆ.