Select Your Language

Notifications

webdunia
webdunia
webdunia
webdunia

23 ಮಕ್ಕಳನ್ನು ದತ್ತು ಪಡೆದ ಪ್ರತಿಭಾವಂತ ನಟಿ ಹನ್ಸಿಕಾ ಮೊಟ್ವಾನಿ

23 ಮಕ್ಕಳನ್ನು ದತ್ತು ಪಡೆದ ಪ್ರತಿಭಾವಂತ ನಟಿ ಹನ್ಸಿಕಾ ಮೊಟ್ವಾನಿ
bangalore , ಶನಿವಾರ, 4 ನವೆಂಬರ್ 2023 (19:04 IST)
ತನ್ನ ವಯಸ್ಸು ಕಿರಿಯದಾದರೂ ಆದರ್ಶದ ವಿಷಯದಲ್ಲಿ ತುಂಬಾ ದೊಡ್ಡತನ ಹೊಂದಿರುವ ಈ ಹೆಣ್ಣುಮಗಳು ಈಗಾಗಲೇ 23 ಮಕ್ಕಳನ್ನು ದತ್ತು ತೆಗೆದುಕೊಂಡಿದ್ದಾಳೆ. ಅವರ ರಕ್ಷಣೆ ಮಾಡುತ್ತಿರುವ ಈ ಮಹೋನ್ನತ ವ್ಯಕ್ತಿತ್ವವಾದ ಹನ್ಸಿಕ ತನಗೆ ವಿರಾಮ ದೊರೆತರೆ ಸಾಕು ಮಕ್ಕಳನ್ನು ಭೇಟಿ ಮಾಡಲು ಹೊರಟು ಹೋಗುತ್ತಾಳಂತೆ ನಟಿ ಹನ್ಸಿಕಾ ಮೊಟ್ವಾನಿ.
 
ಸಮಾಜ ಸೇವೆಯನ್ನು ತಮ್ಮ ಬದುಕಿನ ಭಾಗವಾಗಿ ಮಾಡಿಕೊಂಡಿದ್ದಾರೆ ಹಲವರು. ಅದರಲ್ಲೂ ಚಿತ್ರಕಲಾವಿದರು ತಮ್ಮ ಬದುಕನ್ನು ಸಮಾಜ ಸೇವೆಗೆ ಮೀಸಲಿಟ್ಟಿದ್ದಾರೆ. ಆದರೆ ಯಾವುದೇ  ರೀತಿಯಲ್ಲೂ ಸಮಾಜಕ್ಕೆ ಕಿಂಚತ್ತು ಸಹಾಯ ಮಾಡುವ ಮನಸ್ಸಿಲ್ಲದೆ ಗಾಳಿ ಬಂದಾಗ ತೂರಿಕೋ ಎನ್ನುವಂತೆ  ಮನಸ್ಥಿತಿ ಇರುವವರು ಸಹಿತ ಹೇರಳವಾಗಿದ್ದಾರೆ.
 
ಆದರೆ ನಟಿ ಹನ್ಸಿಕಾ ಮಾತ್ರ ತುಂಬಾ ಭಿನ್ನ ಎನ್ನುವುದನ್ನು ಮತ್ತೆ ಮತ್ತೆ ಸಾಬೀತು ಮಾಡಿದ್ದಾಳೆ . ಆಕೆಯು ಗಳಿಸಿದ ಮೊತ್ತದಲ್ಲಿ ಸ್ವಲ್ಪ ಪ್ರಮಾಣವನ್ನು ಬಡವರಿಗೆ ನೀಡುವ ಕೆಲಸ ಮಾಡುತ್ತಿದ್ದಾಳೆ ಈ ಹುಡುಗಿ.
 
ಈಕೆ ಇತ್ತೀಚಿಗೆ ಜನ ಬಳಿ ಒಂದು ಮನವಿ ಮಾಡಿದ್ದಾಳೆ. ನಿಮ್ಮ ಹುಟ್ಟು ಹಬ್ಬದ ದಿನ ಇಲ್ಲವೇ ಯಾವುದಾದರು ವಿಶೇಷವಾದ ಸಂದರ್ಭದಲ್ಲಿ ಬಡವರಿಗೆ, ಅಂಗವಿಕಲರಿಗೆ ಅನ್ನದಾನ ಮಾಡಿ. ನಿಮ್ಮ ಗಳಿಕೆಯ ಸ್ವಲ್ಪ ಭಾಗ ಅಂತಹವರಿಗಾಗಿ ಮೀಸಲಿಡಿ. ನಾನು ಸಾಮಾನ್ಯವಾಗಿ ನನ್ನ ಹುಟ್ಟು ಹಬ್ಬಕ್ಕೆಂದು ಬಡವರಿಗೆ ಸಹಾಯ ಮಾಡುತ್ತೇನೆ ಎಂದು ಹೇಳಿದ್ದಾಳೆ. ಈಕೆಯ ಸಮಾಜಮುಖಿ ವ್ಯಕ್ತಿತ್ವ ಸಮಾಜಕ್ಕೆ ಮಾದರಿ.
 

Share this Story:

Follow Webdunia kannada

ಮುಂದಿನ ಸುದ್ದಿ

3-4 ದಿನದಲ್ಲಿ ಲೋಕಸಭೆ ಅಭ್ಯರ್ಥಿಗಳ ಪಟ್ಟಿಬಿಡುಗಡೆ-ಡಿಕೆಶಿ