Publish Date: Thu, 02 Nov 2023 (13:03 IST)
Updated Date: Thu, 02 Nov 2023 (13:07 IST)
ಮಲ್ಲಿಕಾ ಶರಾವತ್ತು ಮದುವೆ ಮಾಡ್ಕೊತೀನಿ ಅಂತ ಒಂದು ಕಡೆ ರಿಯಾಲಿಟಿ ಶೋ ಮಾಡ್ತಾ ಇದ್ದಾಳೆ. ಮತ್ತೊಂದು ಕಡೆ ನನಗೆ ರಜನಿಕಾಂತ್ ಅಂದ್ರೆ ಇಷ್ಟ. ಅವರ ಜೊತೆ ಡೇಟಿಂಗ್ ಮಾಡೋಕೆ ಆಸೆ ಅಂತ ತನ್ನ ಒಳಗೆ ಅದುಮಿಟ್ಟುಕೊಂಡಿದ್ದ ಬಯಕೆಯನ್ನು ಹೊರ ಚೆಲ್ಲಿದ್ದಾಳೆ.
ಹೆಣ್ಣು ಮಕ್ಕಳೇ ಹೀಗೆ .. ಏನೇನೇನೋ ಆಸೆ.. ಅದಕ್ಕೆ ಅರ್ಥ ಇರಲಿ, ಬಿಡಲಿ ತಮ್ಮ ಆಸೆಯನ್ನು ವ್ಯಕ್ತ ಪಡಿಸುದವುದರಲ್ಲಿ ಸದಾ ಮುಂದೆ. ಇಂತಹ ಆಸೆ ಕೇವಲ ಸಾಮಾನ್ಯ ಹೆಣ್ಣುಮಕ್ಕಳಿಗೆ ಮಾತ್ರವಲ್ಲ ಸೂಪರ್ ಸ್ಟಾರಿಣಿಯರಿಗೂ ಇರುತ್ತೆ. ಆದರೆ ಅದು ಅವರರವರ ಭಾವಕ್ಕೆ ತಕ್ಕಂತೆ ವ್ಯಕ್ತ ಆಗುತ್ತೆ.ಸೂಪರ್ ಸ್ಟಾರ್ ರಜನಿ ಕಾಂತ್ ಜೊತೆ ಬದುಕಲ್ಲಿ ಒಂದು ಸಿನಿಮಾದಲ್ಲಾದರು ನಟಿಸ ಬೇಕು ಎಂದು ಆಸೆ ಪಡುವ ಹೀರೋಯಿನ್ ಗಳು ಬೇಕಾದಷ್ಟಿದ್ದಾರೆ. ಆದರೆ ಸೆಕ್ಸಿ ಹಾಟ್ ಮಲ್ಲಿಕಾ ಶರಾವತ್ ಇಷ್ಟಾನೆ ಬೇರೆ ಆಗಿದೆ.
ಕಾಲಿವುಡ್ ನ ದಶಾವತಾರಂ ಚಿತ್ರದಲ್ಲಿ ನಟಿಸಿರುವ ಮಲ್ಲಿಕಾ ಇತ್ತೀಚೆಗೆ ಶಿಂಬು ಚಿತ್ರ ಒಸ್ತಿಯಲ್ಲಿ ವಿಶೇಷವಾದ ಹಾಡಿನಲ್ಲಿ ನಟಿಸಿದ್ದಾಳೆ. ಈಗ ಅಮೆರಿಕದಲ್ಲಿ ನಡೆಯುತ್ತಿರುವ ವರ ಪರೀಕ್ಷೆ ರಿಯಾಲಿಟಿ ಶೋನಲ್ಲಿಯೂ ಬ್ಯುಸಿ ಆಗಿರುವ ಶರಾವತ್ತೂ ಗೆ15 ಮಂದಿ ಹುಡುಗರು ಹೃದಯವನ್ನು ಹರಿವಾಣದಲ್ಲಿಟ್ಟು ಕೊಟ್ಟಿದ್ದಾರೆ.
ಅವರ ಪ್ರಿಯ ಮಾತುಗಳನ್ನು ಕೇಳಿದಾಕೆ ಖುಷಿಯಿಂದ ಅವರಿಗೆ ಕಿಸ್ ಕೊಟ್ಟಿದ್ದಾಳಂತೆ.ಯಾರ ಜೊತೆ ಡೇಟಿಂಗ್ ಮಾಡ್ತೀರಿ ಎನ್ನುವಪ್ರಶ್ನೆಗೆ ಆಕೆ ಹೇಳಿದ್ದು ಸೂಪರ್ ಸ್ಟಾರ್ ರಜನಿ ಕಾಂತ್ ಹೆಸರು .ದ್ವೀಪದಲ್ಲಿ ಏಕಾಂತವಾಗಿ ರಜನಿ ಜೊತೆ ಡೇಟಿಂಗ್ ಮಾಡೋ ಆಸೆ ಆಕೇದು... ರಜನಿ ಅಂದ್ರೆ ಸುಮ್ನೆನಾ?