Select Your Language

Notifications

webdunia
webdunia
webdunia
webdunia

ಐಶ್ವರ್ಯ ರೈ ಐಟಂ ಹಾಡೊಂದಕ್ಕೆ ಹೆಜ್ಜೆ ಹಾಕುತ್ತಾರೆ?

aishwarya rai
bangalore , ಗುರುವಾರ, 2 ನವೆಂಬರ್ 2023 (10:55 IST)
ಐಶ್ವರ್ಯ ರೈ ಬ್ಯುಸಿಯಲ್ಲಿ ಇರುವುದರಿಂದ ಬಾಲಿವುಡ್ ಹಾಗೂ ಐಶ್ ಅಭಿಮಾನಿಗಳು ಆಕೆಯನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎಂಬುದಂತೂ ನಿಜ. ಹಾಗೆಂದು ಆಕೆ ನನ್ನ ಚಿತ್ರದ ಐಟಂ ಹಾಡಿಗೆ ನಟಿಸುತ್ತಿಲ್ಲ ಎಂದು ಬನ್ಸಾಲಿ ಸ್ಪಷ್ಟಪಡಿಸಿದ್ದಾರೆ. ಈ ಹಿಂದೆ ಐಶ್ವರ್ಯ ಬನ್ಸಾಲಿ ಅವರ ಗುಝಾರಿಶ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.
 
 
ಐಶ್ವರ್ಯ ರೈ  ಐಟಂ ಹಾಡೊಂದಕ್ಕೆ ಹೆಜ್ಜೆ ಹಾಕುತ್ತಾರೆ ಎಂಬ ಸುದ್ದಿ ವಾರದ ಹಿಂದೆ ಹಬ್ಬಿತ್ತು. ಈ ಮೂಲಕ ಐಶ್ವರ್ಯಗೆ ಭರ್ಜರಿ ರಿ ಎಂಟ್ರಿ ಸಿಕ್ಕಂತಾಗುತ್ತದೆ ಎಂದೂ ಮಾಧ್ಯಮದಲ್ಲಿ ಪ್ರಸಾರವಾಗಿತ್ತು. ಆದರೆ ಈ ಸುದ್ದಿ ಸುಳ್ಳು, ಇದು ಕೇವಲ ಗಾಸಿಪ್ ಮಾತ್ರ ಎಂದು ಸಂಜಯ್ ಲೀಲಾ ಬನ್ಸಾಲಿ ಅವರೇ ಸ್ಪಷ್ಟಪಡಿಸಿದ್ದಾರೆ.
 
 
ಐಶ್ವರ್ಯ ಐಟಂ ಹಾಡಿಗೆ ಹೆಜ್ಜೆ ಹಾಕುತ್ತಿಲ್ಲ. ಐಟಂ ಹಾಡಿಗೆ ಮೊದಲು ಸೋನಾಕ್ಷಿ ಸಿನ್ಹಾ ಹಾಗೂ ಮಾಧುರಿ ದೀಕ್ಷಿತ್ ಅವರ ಹೆಸರು ಕೇಳಿ ಬಂದಿತ್ತು. ಈಗ ಅದಕ್ಕೆ ಐಶ್ವರ್ಯ ಹೆಸರೂ ಸೇರಿದೆ. ಇವೆಲ್ಲವೂ ಕೇವಲ ವದಂತಿಗಳೇ ಹೊರ ನಿಜ ಸಂಗತಿಯಲ್ಲ ಎಂದು ಸ್ವತಃ ಬನ್ಸಾಲಿ ಅವರೇ ಹೇಳಿಕೊಂಡಿದ್ದಾರೆ. 
 
ಮಗಳು ಆರಾಧ್ಯಗಳಿಗೆ ಐಶ್ವರ್ಯ ಮೊದಲ ಆದ್ಯತೆ ನೀಡುತ್ತಾರೆಯೇ ಹೊರತು ಐಟಂ ಹಾಡಿಗಲ್ಲ ಎಂದು ಆಕೆಯ ಆಪ್ತರೊಬ್ಬರು ಹೇಳಿಕೊಂಡಿದ್ದಾರೆ. ಹಿಮೇಶ್ ರೇಶಮಿಯಾ ನಿರ್ಮಾಣದ ರಿಮೇಕ್ ಚಿತ್ರ 1983ರಲ್ಲಿ ಬಿಡುಗಡೆಗೊಂಡ ಮಾಸೂಮ್ ಚಿತ್ರದಲ್ಲಿ ಐಶ್ವರ್ಯ ನಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಆ ಚಿತ್ರದ ಕಥೆಯನ್ನು ಐಶ್ವರ್ಯ ಇಷ್ಟಪಟ್ಟಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಈ ಮಾಹಿತಿಯ ಸತ್ಯಾಸತ್ಯತೆಗೆ ಇನ್ನೊಂದಷ್ಟು ಕಾಲ ಕಾಯಬೇಕಷ್ಟೇ.

Share this Story:

Follow Webdunia kannada

ಮುಂದಿನ ಸುದ್ದಿ

ಅಪ್ಪು ಹೆಸರಿನಲ್ಲಿ ಮತ್ತೆ ಆಂಬ್ಯುಲೆನ್ಸ್ ನೀಡಿದ ನಟ ಪ್ರಕಾಶ್ ರಾಜ್