Select Your Language

Notifications

webdunia
webdunia
webdunia
webdunia

ಶಾರುಖ್ ಖಾನ್ ಜನ್ಮದಿನ: ಬಾಲಿವುಡ್ ಬಾದ್ ಶಹಾನ ಆಸ್ತಿ ಮೌಲ್ಯವೆಷ್ಟು?

ಶಾರುಖ್ ಖಾನ್ ಜನ್ಮದಿನ: ಬಾಲಿವುಡ್ ಬಾದ್ ಶಹಾನ ಆಸ್ತಿ ಮೌಲ್ಯವೆಷ್ಟು?
ಮುಂಬೈ , ಗುರುವಾರ, 2 ನವೆಂಬರ್ 2023 (09:24 IST)
ಮುಂಬೈ: ಬಾಲಿವುಡ್ ಬಾದ್ ಶಹಾ ಎಂದೇ ಕರೆಯಿಸಿಕೊಳ್ಳುವ ಸೂಪರ್ ಸ್ಟಾರ್‍ ಶಾರುಖ್ ಖಾನ್ ಗೆ ಇಂದು ಜನ್ಮದಿನದ ಸಂಭ್ರಮ.

ಶಾರುಖ್ ಇಂದು 58 ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಹುಟ್ಟುಹಬ್ಬದ ನಿಮಿತ್ತ ಮಧ್ಯರಾತ್ರಿಯಿಂದಲೇ ಅವರ ಮನೆ ಮುಂದೆ ಅಭಿಮಾನಿಗಳ ದಂಡೇ ನೆರೆದಿತ್ತು. ಮನೆ ಮುಂದೆ ಬಂದ ಅಭಿಮಾನಿಗಳಿಗೆ ಶಾರುಖ್ ಮನೆಯ ಬಾಲ್ಕನಿಯಲ್ಲಿ ಎಂದಿನಂತೆ ನಿಂತು ಕೈ ಮುಗಿದು ಧನ್ಯವಾದ ಸಲ್ಲಿಸಿದ್ದಾರೆ.

ಇತ್ತೀಚೆಗಷ್ಟೇ ಜವಾನ್ ಸಿನಿಮಾ ಸಕ್ಸಸ್ ಖುಷಿಯಲ್ಲಿರುವ ಶಾರುಖ್ ಭಾರತದ ಶ್ರೀಮಂತ ನಟರಲ್ಲಿ ಒಬ್ಬರು. ಅವರ ಆಸ್ತಿ ಮೌಲ್ಯವೇ 6000 ಕೋಟಿ ರೂ.ಗೂ ಅಧಿಕ. ತಮ್ಮದೇ ನಿರ್ಮಾಣ ಸಂಸ್ಥೆ, ಹಲವು ಉತ್ಪನ್ನಗಳಿಗೆ ರಾಯಭಾರಿಯಾಗಿರುವ ಶಾರುಖ್ ಒಂದು ಸಿನಿಮಾಗೆ 100 ಕೋಟಿ ರೂ.ಗೂ ಅಧಿಕ ಸಂಭಾವನೆ ಪಡೆಯುತ್ತಾರೆ. ಭಾರತದಲ್ಲಿ ಮಾತ್ರವಲ್ಲ, ಜಾಗತಿಕವಾಗಿ ಶ್ರೀಮಂತ ನಟರ ಪಟ್ಟಿಯಲ್ಲಿ ಶಾರುಖ್ ಎರಡನೇ ಸ್ಥಾನದಲ್ಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಲಾರ್ ನಲ್ಲಿ ಪ್ರಭಾಸ್ ಗೆ ವಸಿಷ್ಠ ಸಿಂಹ ಧ್ವನಿ?